ಸುಖ-ದುಖಃಗಳನ್ನು ಸಮನಾಗಿ ಸ್ವೀಕರಿಸಿ

ಯಲಬುರ್ಗಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಉದ್ಘಾಟಿಸಿದರು. ಪ್ರಮುಖರಾದ ಅಮರೇಶ ಕಲಬುರಗಿ, ಅಂದಯ್ಯ ಕಳ್ಳಿಮಠ, ಎಸ್.ಡಿ.ಗಾಂಜಿ, ವೀರಭದ್ರಯ್ಯ ಹಿತ್ತಲಮನಿ, ಅಡಿವೆಯ್ಯ ಕಲ್ಯಾಣಮಠ, ಶಿವಕುಮಾರ್ ಸರಗಣಚಾರ, ಮುದಕಪ್ಪ ಸಜ್ಜನ, ಕಲ್ಲಪ್ಪ ಗಾಂಜಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದಂಪತಿಗಳು
  • ಸಾಮೂಹಿಕ ವಿವಾಹ
  • ಗರ್ಭಿಣಿಯರಿಗೆ ಸೀಮಂತ
  • ಕಾರ್ತಿಕೋತ್ಸವ

ಸುಖ-ದುಖಃಗಳನ್ನು ಸಮನಾಗಿ ಸ್ವೀಕರಿಸಿ

ಯಲಬುರ್ಗಾ: ದಂಪತಿಗಳು ಜೀವನದ ಸುಖ-ದುಖಃಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದು ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ವೀರಭದ್ರೇಶ್ವರ ಕಾರ್ತಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮೂಹಿಕ ಮದುವೆಗಳು ಬಡವರಿಗೆ ಸಹಕಾರಿಯಾಗಿವೆ. ಪ್ರತಿ ವರ್ಷ ದೇವಸ್ಥಾನ ಸಮಿತಿಯಿಂದ ಇಂತಹ ಕಾರ್ಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಪಾಲಿಸುವುದು ಅಗತ್ಯ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷ ಸಂಗಣ್ಣ ಟೆಂಗಿನಕಾಯಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಗೆ ಪ್ರೋತ್ಸಾಹಿಸುವ ಮನೋಭಾವ ಹೆಚ್ಚಾಗಲಿ. ನವ ದಂಪತಿಗಳು ಜೀವನದಲ್ಲಿ ಸಿಹಿ-ಕಹಿಯನ್ನು ಸಮನಾಗಿ ಸ್ವೀಕರಿಸಿ ಉತ್ತಮ ಬದುಕು ಕಟ್ಟಿಕೊಳ್ಳಲಿ ಎಂದು ಸಲಹೆ ನೀಡಿದರು.
ಚೊಚ್ಚಲ ಗರ್ಭಿಣಿಯರಿಗೆ ದೇವಸ್ಥಾನ ಸಮಿತಿಯಿಂದ ಸೀಮಂತ ಮಾಡಲಾಯಿತು. ನಂತರ ಶ್ರೀ ವೀರಭದ್ರೇಶ್ವರ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಪ್ರಮುಖರಾದ ಅಮರೇಶ ಕಲಬುರಗಿ, ಅಂದಯ್ಯ ಕಳ್ಳಿಮಠ, ಎಸ್.ಡಿ.ಗಾಂಜಿ, ವೀರಭದ್ರಯ್ಯ ಹಿತ್ತಲಮನಿ, ಅಡಿವೆಯ್ಯ ಕಲ್ಯಾಣಮಠ, ಶಿವಕುಮಾರ್ ಸರಗಣಚಾರ, ಮುದಕಪ್ಪ ಸಜ್ಜನ, ಕಲ್ಲಪ್ಪ ಗಾಂಜಿ, ಮಲ್ಲೇಶಗೌಡ ಮಾಲಿಪಾಟೀಲ್, ಸಂಗಪ್ಪ ಕರಂಡಿ, ಶಿವಪ್ಪ ಶಾಸ್ತ್ರಿ, ವಿರೂಪಾಕ್ಷಯ್ಯ ಪರಯ್ಯನಮಠ, ಸಿದ್ದಯ್ಯ ಕೋಣೂರು, ಶರಣಪ್ಪ ಕೊಡಗಲಿ, ಬಾಳಪ್ಪ ಹಡಪದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net