ಗಂಗಾವತಿಯಲ್ಲಿ ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಿಂದ ಹಮ್ಮಿಕೊಂಡಿದ್ದ ಸ್ಫೂರ್ತಿ ಕಲರವ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಲಿಂಗರಾಜ್ ಉದ್ಘಾಟಿಸಿದರು. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ಸಮೂಹ ಸಂಸ್ಥೆ ಅಧ್ಯಕ್ಷೆ ನಿರ್ಮಲಾ ಸವಡಿ, ಪ್ರಾಚಾರ್ಯ ಡಾ.ಬಸವರಾಜ ಸವಡಿ ಇತರರಿದ್ದರು.
ಗಂಗಾವತಿ: ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ವೈದ್ಯ ವೃತ್ತಿ ನಿಭಾಯಿಸಬೇಕು. ಉತ್ತಮ ನಡತೆ ಸಾಧನೆಗೆ ವೇದಿಕೆಯಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಲಿಂಗರಾಜ್ ಹೇಳಿದರು.
ನಗರದ ಅಮರ ಗಾರ್ಡ್‌ನಲ್ಲಿ ಸ್ಫೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ಫೂರ್ತಿ ಕಲರವ ಕಾರ್ಯಕ್ರಮದಲ್ಲಿ ಮಾತನಾಡಿದರು. ವೈದ್ಯಕೀಯ ವತ್ತಿ ಪವಿತ್ರವಾಗಿದ್ದು, ಜನರಿಗೆ ಹತ್ತಿರವಾಗುವ ವೃತ್ತಿ. ವೃತ್ತಿ ಜೀವನ ಸವಾಲಾಗಿ ಸ್ವೀಕರಿಸಬೇಕಿದ್ದು, ಮಾನವೀಯತೆಗೆ ಅದ್ಯತೆ ನೀಡಿ ಎಂದು ತಿಳಿಸಿದರು. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಮಾತನಾಡಿ, ರೋಗಿಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗದಂತೆ ವೃತ್ತಿ ನಿಭಾಯಿಸಬೇಕು.
ಆಸೆ, ಆಮಿಷಗಳಿಗೆ ಬಲಿಯಾಗಿ ರೋಗಿಯನ್ನು ನಿರ್ಲಕ್ಷಿಸಬಾರದು. ವೈದ್ಯಕೀಯ ವತ್ತಿ ಘನತೆ ಮತ್ತು ಕೀರ್ತಿ ಹೆಚ್ಚಿಸಬೇಕಿದೆ ಎಂದರು. 96 ವಿದ್ಯಾರ್ಥಿಗಳಿಗೆ ಪದವಿ ವಿತರಿಸಲಾಯಿತು. ಕಿರುನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ಸಮೂಹ ಸಂಸ್ಥೆ ಅಧ್ಯಕ್ಷೆ ನಿರ್ಮಲಾ ಸವಡಿ, ಪ್ರಾಚಾರ್ಯ ಡಾ.ಬಸವರಾಜ ಸವಡಿ, ಪ್ರಮುಖರಾದ ವಿರೂಪಾಕ್ಷಪ್ಪ ಮುಷ್ಟಿ, ಡಾ.ಉಮೇಶ ಪುರದ್, ರವಿ, ರಾಜಶೇಖರ್, ಡಾ.ಸತೀಶ ರಾಯ್ಕರ್, ಕವಿತಾ, ಶಾಹೀದಾ ಇತರರಿದ್ದರು.