ಉನ್ನತ ಶಿಕ್ಷಣ ಇಲಾಖೆಗೆ ಕೊಪ್ಪಳ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು ಪತ್ರ ಬರೆದಿದ್ದು, ವಿವಿಗೆ ಆಡಳಿತಾಧಿಕಾರಿ ಹುದ್ದೆ ಅವಶ್ಯಕತೆ ಇಲ್ಲ. ಇದರಿಂದ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸರ್ಕಾರ ಕ್ರಮ ಕೈಗೊಂಡಿದೆ. ವಿವಿ ಸ್ಥಾಪನೆಯಾದ ಒಂದು ವರ್ಷದ ನಂತರ ಆಡಳಿತ ಅವಶ್ಯಕತೆಗಳನ್ನು ಮನಗಂಡು ಆಟೊನಾಮಸ್ ಬಾಡಿ ಮತ್ತು ಸಿಂಡಿಕೇಟ್ ಅನುಮೋದನೆಯೊಂದಿಗೆ ಆಡಳಿತಾಧಿಕಾರಿ ಹುದ್ದೆ ಸೃಷ್ಟಿಸಲಾಗಿತ್ತು. ವಿವಿ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಪದವಿ ಕಾಲೇಜುಗಳಿರುವ ಕಾರಣ ಆಡಳಿತ ನಿರ್ವಹಣೆ ಸುಗಮಗೊಳಿಸಲು ಈ ಹುದ್ದೆ ಅಗತ್ಯವೆಂದು ನಿರ್ಧರಿಸಲಾಗಿತ್ತು.