ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಣ್ಣ ಬೆಣಕಲ್, ತಾಲೂಕಾಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಕಾರ್ಯದರ್ಶಿ ಮುತ್ತಣ್ಣದಾಸನಾಳ್, ಪದಾಧಿಕಾರಿಗಳಾದ ಚಾಂದಬೀ ದಾಸನಾಳ್, ದುರುಗಪ್ಪ ಪೂಜಾರಿ ಇತರರಿದ್ದರು.
ಗಂಗಾವತಿ: ಕೇಂದ್ರ ಸರ್ಕಾರದ ವಿದೇಶಿ ವಾಣಿಜ್ಯ ಒಪ್ಪಂದ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಕೇಂದ್ರ ಸರ್ಕಾರ ಕೈಗೊಂಡ ಸಾಮ್ರಾಜ್ಯ ಶಾಹಿ ಮುಕ್ತ ವಾಣಿಜ್ಯ ಒಪ್ಪಂದ ಜನವಿರೋಧಿ ನೀತಿಯಾಗಿದ್ದು, ಅಮೆರಿಕ ಮತ್ತು ಭಾರತ ಮುಕ್ತ ವಾಣಿಜ್ಯ ಒಪ್ಪಂದದಿಂದ ರಾಜ್ಯದ ಕೃಷಿ ಕ್ಷೇತ್ರ ದಿವಾಳಿಯಾಗಲಿದೆ.
ಸಾಮಾಜ್ಯಶಾಹಿ ಬೆದರಿಕೆ ಮತ್ತು ಒತ್ತಡಕ್ಕೆ ಮಣಿದಿರುವ ಕೇಂದ್ರದ ಬಿಜೆಪಿ ಸರ್ಕಾರ, ರೈತಾಪಿ ಸಮುದಾಯದ ಹಿತಾಸಕ್ತಿ ಕಡೆಗಣಿಸಿದೆ. ಇಂತಹ ಧೋರಣೆಯಿಂದ ರೈತರು ಮತ್ತು ಕೃಷಿ ಕಾರ್ಮಿಕರ ಮೇಲೆ ಪರಿಣಾಮ ಬೀರಲಿದ್ದು, ಸಂಘಟನಾತ್ಮಕವಾಗಿ ಹತ್ತಿಕ್ಕಬೇಕಿದೆ. ವಿದೇಶಿ ವಾಣಿಜ್ಯ ಒಪ್ಪಂದ ವಿರುದ್ಧ ಜನ ಧ್ವನಿ ಎತ್ತಬೇಕಿದೆ ಎಂದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಣ್ಣ ಬೆಣಕಲ್, ತಾಲೂಕಾಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಕಾರ್ಯದರ್ಶಿ ಮುತ್ತಣ್ಣದಾಸನಾಳ್, ಪದಾಧಿಕಾರಿಗಳಾದ ಚಾಂದಬೀ ದಾಸನಾಳ್, ದುರುಗಪ್ಪ ಪೂಜಾರಿ, ಪಂಪಾಪತಿ ಚಿಕ್ಕಜಂತಕಲ್, ಕರಿಬಸವ,ಶರಣಪ್ಪ, ಶ್ರೀಕಾಂತ, ಬಿ.ದುರುಗಪ್ಪ ಹೊಸಳ್ಳಿ, ಗಂಗಮ್ಮ ಹೆಬ್ಬಾಳ ಇತರರಿದ್ದರು.