ಭೂ ತಾಯಿಗೆ ಭಕ್ತಿಯ ನಮನ

ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ಜಮೀನೊಂದರಲ್ಲಿ ಎಳ್ಳಮಾವಾಸ್ಯೆ ನಿಮಿತ್ತ ಚರಗ ಚೆಲ್ಲುತ್ತಿರುವುದು.
ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ಜಮೀನೊಂದರಲ್ಲಿ ಎಳ್ಳಮಾವಾಸ್ಯೆ ನಿಮಿತ್ತ ಚರಗ ಚೆಲ್ಲುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಎಳ್ಳಮಾವಾಸ್ಯೆ
  • ಭಕ್ತಿಯ ನಮನ
  • ಮರಕ್ಕೆ ಪೂಜೆ

ಭೂ ತಾಯಿಗೆ ಭಕ್ತಿಯ ನಮನ

ಕುಕನೂರು: ರೈತರ ಹಬ್ಬ ಎಳ್ಳಮಾವಾಸ್ಯೆ ದಿನವಾದ ಶುಕ್ರವಾರ ರೈತ ಸಮುದಾಯ ಭೂ ತಾಯಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಚರಗ ಚೆಲ್ಲುವ ಮೂಲಕ ಭಕ್ತಿಯ ನಮನ ಸಲ್ಲಿಸಿತು.
ಪ್ರಸಕ್ತ ವರ್ಷ ಉತ್ತಮ ಮಳೆ ಹಾಗೂ ತಂಪು ಗಾಳಿ ಮಿಶ್ರಿತ ವಾತಾವರಣದಿಂದ ಹೊಲದಲ್ಲಿ ಹಿಂಗಾರು ಹಂಗಾಮಿನ ಕಡಲೆ, ಬಿಳಿಜೋಳ ಹಾಗೂ ಕುಸಬೆ ಬೆಳೆಗಳು ಸಮೃದ್ಧಿಯಾಗಿ ಬೆಳೆದಿವೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು ಜಮೀನಿನಲ್ಲಿರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.
ಹಬ್ಬಕ್ಕೆ 4 ದಿನ ಇರುವಾಗಲೇ ಮನೆಯಲ್ಲಿ ಹಬ್ಬದ ತಯಾರಿ ಆರಂಭವಾಗಿರುತ್ತದೆ. ವಿಶೇಷವಾಗಿ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ವಿವಿಧ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ ಪಲ್ಯ ಹಾಗೂ ಎಳ್ಳು, ಶೇಂಗಾ ಹೋಳಿಗೆ ತಯಾರಿಸುತ್ತಾರೆ.
ಎತ್ತುಗಳನ್ನು ಸಿಂಗರಿಸಿ ಚಕ್ಕಡಿಯಲ್ಲಿ ಕುಟುಂಬ ಸಮೇತ ಜಮೀನಿಗೆೆ ತೆರಳಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಊಟ ಸವಿಯುತ್ತಾರೆ. ಉತ್ತರ ಕರ್ನಾಟಕ ಭಾಗದ ರೈತರು ಈ ಹಬ್ಬವನ್ನು ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net