ಸರ್ಕಾರಿ ಜಾಗಕ್ಕೆ ಖಾಸಗಿಯವರ ಗುದ್ದಾಟ

ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಸರ್ಕಾರಿ ಜಾಗ ವಶಕ್ಕಾಗಿ ಎರಡು ಗುಂಪಿನ ನಡುವೆ ವಾಗ್ವಾದ ಇತ್ಯರ್ಥಕ್ಕಾಗಿ ಗ್ರಾಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾತನಾಡಿದರು. ತಹಸೀಲ್ದಾರ್ ಯು.ನಾಗರಾಜ್, ಪ್ರಭಾರ ಪಿಐ ಪ್ರಕಾಶ ಮಾಳೆ, ಪಿಡಿಒ ನಾಗೇಶ ಕುರ್ಡಿ ಇತರರಿದ್ದರು.
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಸರ್ಕಾರಿ ಜಾಗ ವಶಕ್ಕಾಗಿ ಎರಡು ಗುಂಪಿನ ನಡುವೆ ವಾಗ್ವಾದ ಇತ್ಯರ್ಥಕ್ಕಾಗಿ ಗ್ರಾಪಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾತನಾಡಿದರು. ತಹಸೀಲ್ದಾರ್ ಯು.ನಾಗರಾಜ್, ಪ್ರಭಾರ ಪಿಐ ಪ್ರಕಾಶ ಮಾಳೆ, ಪಿಡಿಒ ನಾಗೇಶ ಕುರ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳವನ್ನು ತನ್ನ ಸುಪರ್ದಿಗೆ ಪಡೆದ ಗ್ರಾಮಾಡಳಿತ
  • ಸಮಸ್ಯೆ ಇತ್ಯರ್ಥಕ್ಕಾಗಿ ಅಧಿಕಾರಿಗಳಿಂದ ಸಭೆ
ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿ ಸರ್ಕಾರಿ ಜಾಗ ವಶಕ್ಕಾಗಿ ಎರಡು ಗುಂಪಿನ ನಡುವೆ ವಾಗ್ವಾದ ಮಂಗಳವಾರ ನಡೆದಿದ್ದು, ಉದ್ದೇಶಿತ ಸ್ಥಳವನ್ನು ಗ್ರಾಪಂ ಸುಪರ್ದಿಗೆ ಪಡೆದುಕೊಂಡಿದೆ.
ಪಟ್ಟಣದ ಗ್ರಾಪಂ ಕಚೇರಿ ಸನಿಹದಲ್ಲಿದ್ದ ಸರ್ಕಾರಿ ಜಾಗದಲ್ಲಿ ಕಲಾಲ್ ಸಮುದಾಯದವರು ಹಲವು ವರ್ಷಗಳಿಂದ ಮಾಂಸ ಮಾರಾಟ ಮಾಡುತ್ತಿದ್ದು, ಇತ್ತೀಚಿಗೆ ನಾಮಲಕ ಹಾಕಿಕೊಂಡಿದ್ದರು. ಉದ್ದೇಶಿತ ಜಾಗ ನಮಗೆ ನೀಡುವಂತೆ ದಲಿತಪರ ಸಂಘಟನೆ ಮುಖಂಡರು ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಎರಡೂ ಗುಂಪಿನವರು ಜಾಗದ ಮೇಲೆ ಹಕ್ಕು ಸಾಧಿಸಲು ಬಂದಾಗ ವಾಗ್ವಾದ ನಡೆದಿದ್ದರಿಂದ ವಿಕೋಪಕ್ಕೆ ತಿರುಗಿತ್ತು. ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಜಾಗವನ್ನು ಗ್ರಾಪಂ ಸುಪರ್ದಿಗೆ ಪಡೆಯುವಂತೆ ತಾಲೂಕಾಡಳಿತ ಸೂಚಿಸಿದ್ದರಿಂದ ಕಲಾಲ್ ಸಮುದಾಯದವರು ಹಾಕಿದ್ದ ಶೆಡ್ ತೆರವುಗೊಳಿಸಲಾಯಿತು.
ತಹಸೀಲ್ದಾರ್ ಭೇಟಿ
ಸ್ಥಳಕ್ಕೆ ತಹಸೀಲ್ದಾರ್ ಯು.ನಾಗರಾಜ್, ತಾಪಂ ಇಒ ರಾಮರೆಡ್ಡಿ ಪಾಟೀಲ್, ಪ್ರಭಾರ ಪಿಐ ಪ್ರಕಾಶ ಮಾಳೆ ನೇತೃತ್ವದ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿತು. ಗ್ರಾಪಂ ಕಚೇರಿಯಲ್ಲಿ ಎರಡು ಗುಂಪಿನೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿತು. ಗ್ರಾಪಂ ಸೇರಿದ ಜಾಗವಾಗಿದ್ದರಿಂದ ಇಬ್ಬರಿಗೂ ಅವಕಾಶ ನೀಡಲ್ಲ. ಬೇಕಾದರೆ ಕಲಾಲ್ ಸಮುದಾಯದವರಿಗೆ ಮಾಂಸ ಮಾರಾಟಕ್ಕೆ ಎಪಿಎಂಸಿ ಉಪಮಾರುಕಟ್ಟೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಈ ಬಗ್ಗೆ ಪಿಡಿಒ ನಾಗೇಶ ಕುರ್ಡಿ ಮಾತನಾಡಿ, ಉದ್ದೇಶಿತ ಸ್ಥಳವನ್ನು ಗ್ರಾಪಂ ವ್ಯಾಪ್ತಿಗೆ ಪಡೆದುಕೊಂಡಿದ್ದು, ಜಾಗದ ವ್ಯಾಪ್ತಿಯಲ್ಲಿ ಶಾಲೆ ಮತ್ತು ದೇವಾಲಯವಿದೆ. ಮಾಂಸದ ತ್ಯಾಜ್ಯ ಎಲ್ಲೆಂದರಲ್ಲಿ ಬೀಳುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ ತಾತ್ಕಾಲಿಕ ಶೆಡ್ ತೆರವುಗೊಳಿಸಲಾಗಿದೆ ಎಂದರು. ಉಪತಹಸೀಲ್ದಾರ್ ಮಹೆಬೂಬ್‌ಅಲಿ, ಪಿಎಸೈ ವೆಂಕಟೇಶ ಚವ್ಹಾಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net