ಶ್ರೇಷ್ಠ ಮೌಲ್ಯಗಳನ್ನು ಸಾರಿದ ಮಾನವತಾವಾದಿ

ಮುನಿರಾಬಾದ್ ಸಮೀಪದ ಹಿಟ್ನಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಶಿವಸಂಗಯ್ಯ ಹಿರೇಮಠ, ಶಿಕ್ಷಕರಾದ ಜಿಲಾನಿಸಾಬ್, ಶಿವಪ್ಪ ಹಂದ್ರಾಳ, ಪ್ರೀತಿ ಚುಳಕಿ ಇತರರಿದ್ದರು.
ಮುನಿರಾಬಾದ್ ಸಮೀಪದ ಹಿಟ್ನಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಶಿವಸಂಗಯ್ಯ ಹಿರೇಮಠ, ಶಿಕ್ಷಕರಾದ ಜಿಲಾನಿಸಾಬ್, ಶಿವಪ್ಪ ಹಂದ್ರಾಳ, ಪ್ರೀತಿ ಚುಳಕಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬಿಗರ ಚೌಡಯ್ಯ ಜಯಂತಿ
  • ನಿಜಶರಣ

ಶ್ರೇಷ್ಠ ಮೌಲ್ಯಗಳನ್ನು ಸಾರಿದ ಮಾನವತಾವಾದಿ

ಮುನಿರಾಬಾದ್: ವಚನಗಳ ಮೂಲಕ ಬದುಕಿನ ಶ್ರೇಷ್ಠ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ ನಿಜಶರಣ ಅಂಬಿಗರ ಚೌಡಯ್ಯ ಎಂದು ಪ್ರಾಚಾರ್ಯ ಶಿವಸಂಗಯ್ಯ ಹಿರೇಮಠ ಹೇಳಿದರು.
ಸಮೀಪದ ಹಿಟ್ನಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೇಣಿಕೃತ ಸಮಾಜದ ಲೋಪಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯ ಅವರ ವಚನಗಳು ಎಲ್ಲರಿಗೂ ಅನುಕರಣೀಯ ಎಂದರು. ಶಿಕ್ಷಕರಾದ ಜಿಲಾನಿಸಾಬ್, ಶಿವಪ್ಪ ಹಂದ್ರಾಳ, ಪ್ರೀತಿ ಚುಳಕಿ, ಪ್ರಶಾಂತ ಹಾದಿಮನಿ, ಸಿ.ಆರ್.ಶೈಲಾ, ಕೆ.ರಾಧಾ, ಓಂಕಾರ್ ಕಲ್ಗುಡಿ, ದೇವಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net