ತಾಲೂಕಿನ ರೈತರ ಗುಳೆ, ಶಾಸಕ ನಾಪತ್ತೆ

ಸಿ.ವಿ. ಚಂದ್ರಶೇಖರ
ಸಿ.ವಿ. ಚಂದ್ರಶೇಖರ
Published on

ಪ್ರಮುಖ ಮುಖ್ಯಾಂಶಗಳು

  • ಸಿ.ವಿ. ಚಂದ್ರಶೇಖರ್​ ಆರೋಪ
ಕೊಪ್ಪಳ : ಜಿಲ್ಲೆಯ ರೈತರು ಭೀಕರ ಬರಗಾಲ ಹಿನ್ನಲೆಯಲ್ಲಿ ತಾಲೂಕಿನ ರೈತರು ಬದುಕಿಗಾಗಿ ಗುಳೆ ಹೋಗುತ್ತಿದ್ದರೆ. ಕೊಪ್ಪಳ ಶಾಸಕ ಮಾತ್ರ ಮಂತ್ರಿಯಾಗಲು ಶತಾಯಗತಾಯ ಪ್ರಯತ್ನ ಮಾಡುತ್ತ ಕ್ಷೇತ್ರವನ್ನೇ ಮರೆತಿದ್ದಾರೆ ಎಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್​ ಆರೋಪಿಸಿದ್ದಾರೆ.
ತಾಲೂಕಿನ ಸುಮಾರು ಶೇ. 40ರಷ್ಟು ರೈತರು ಬಿತ್ತೇ ಇಲ್ಲ. ಬಿತ್ತಿರುವ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಕುಡಿಯಲು ಸಹ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶಾಸಕ ಕ್ಷೇತ್ರದಲ್ಲಿದ್ದು ಬರ ಪರಿಹಾರ ಕಾಮಗಾರಿ ಕಾರ್ಯಕ್ಕೆ ವೇಗ ನೀಡಬೇಕಿತ್ತು. ಆದರೆ ಶಾಸಕ ಕ್ಷೇತ್ರದಲ್ಲಿಲ್ಲದ ಕಾರಣ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗಿಂತ ಅಧಿಕಾರವೇ ಶಾಸಕನಿಗೆ ಮುಖ್ಯವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಕಾರ್ಖಾನೆಗಳ ವಿರುದ್ಧ ಕಳೆದ ಒಂದು ವರ್ಷದಿಂದ ಆರಂಭಿಸಿ ಬೀದಿಗೆ ಇಳಿದಿದ್ದಾರೆ. ತುಂಗಭದ್ರಾ ನದಿ ನೀರನ್ನು ಕೃಷಿಗೆ ಬಿಡುವಂತೆ ರೈತರು ಪ್ರತಿಭಟಿಸುತ್ತಿದ್ದಾರೆ. ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಲು ಸಮಯ ಇರುವ ಸಂಸದ ರಾಜಶೇಖರ್​ ಹಿಟ್ನಾಳ್​ಗೆ ತಮ್ಮ ಕ್ಷೇತ್ರದ ಕೂಗು ಕೇಳುತ್ತಿಲ್ಲವೇ, ಅಥವಾ ಅವರ ಸಮಸ್ಯೆ ಬಗೆಹರಿಸುವ ಮನಸ್ಸಿಲ್ಲವೇ? ಕೊಪ್ಪಳ ಕ್ಷೇತ್ರದ ಜನರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಲು ಸಿದ್ಧರಿದ್ದಾರೆಯೇ? ಕೊನೆಯ ಪಕ್ಷ ಸಂಸತ್ತಿನಲ್ಲಿ ಲೋಕಸಭಾ ಕ್ಷೇತ್ರದ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿಯುವ ನಿಟ್ಟಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆಯೆ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ದೇಶಕ್ಕೆ ಗಂಭೀರ ಸಮಸ್ಯೆ ಬಂದಾಗ ವಿದೇಶ ಪ್ರವಾಸದಲ್ಲಿರುತ್ತಾರೆ. ಅವರ ಹಿಂಬಾಲಕ ಶಾಸಕ ಮತ್ತು ಸಂಸದರು ತಮ್ಮ ಕ್ಷೇತ್ರ ಹತ್ತಿ ಉರಿಯುತ್ತದ್ದರು, ದೆಹಲಿಯಲ್ಲಿ ಬಿಡು ಬಿಟ್ಟಿರುತ್ತಾರೆ. ಕೊಪ್ಪಳದ ರಾಹುಲ್​ ಗಾಂಧಿಗಳಾದ ಇವರ ದುರಾಡಳಿತದ ವಿರುದ್ಧ ಜೆಡಿಎಸ್​ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net