ನುಡಿದಂತೆ ನಡೆದ ಶ್ರೇಷ್ಠ ವಚನಕಾರ

ಕಾರಟಗಿಯ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಮುಖ್ಯಾಧಿಕಾರಿ ಡಾ.ಸಾಬಣ್ಣ ಕಟ್ಟೇಕಾರ ಇತರರಿದ್ದರು.
ಕಾರಟಗಿಯ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಮುಖ್ಯಾಧಿಕಾರಿ ಡಾ.ಸಾಬಣ್ಣ ಕಟ್ಟೇಕಾರ ಇತರರಿದ್ದರು.
Published on

ಕಾರಟಗಿ: ತಹಸಿಲ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶರಣ ನುಲಿಯ ಚಂದಯ್ಯ ಜಯಂತಿ ಶುಕ್ರವಾರ ಆಚರಿಸಲಾಯಿತು.

ಗ್ರೇಡ್ 2 ತಹಸೀಲ್ದಾರ್ ಷಣ್ಮುಖಪ್ಪ ಮಾತನಾಡಿ, ನಾರಾಯಣ ಗುರುಗಳು ಜೀವನದುದ್ದಕ್ಕೂ ಎಲ್ಲ ಧರ್ಮಗಳನ್ನು ಅತ್ಯಂತ ಗೌರವದಿಂದ ಕಂಡವರು. ಮನುಕುಲದ ಒಳಿತಿಗಾಗಿ ಸದಾಯತ್ನಿಸಿದ ಮಹಾಸಂತ. ಹಾಗೆಯೇ 12ನೇ ಶತಮಾನದ ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭವಿ ಶರಣ ನುಲಿಯ ಚಂದಯ್ಯ ಅವರು ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯ ಸಾರಿದ್ದಾರೆ. ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಪಸರಿಸಿದರು. ನುಡಿದಂತೆ ನಡೆದ ಶ್ರೇಷ್ಠ ವಚನಕಾರ ಎಂದರು.
ಪುರಸಭೆ ಕಚೇರಿಯಲ್ಲಿ ಏರ್ಪಡಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟಿಕಾರ ಮಾತನಾಡಿ, ನಾರಾಯಣ ಗುರುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಶಿಕ್ಷಣವಂತನಾಗಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯ ಹೊಂದಿದ್ದರು. ನುಲಿಯ ಚಂದಯ್ಯನವರು ವಚನಗಳಿಂದ ಕಲ್ಯಾಣ ಕ್ರಾಂತಿಗೆ ಶ್ರಮಿಸಿದ್ದಾರೆ ಎಂದರು. ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಇತರರಿದ್ದರು.
ತಾಪಂ ಕಚೇರಿಯಲ್ಲಿ ಇಒ ಲಕ್ಷ್ಮೀದೇವಿ ಅವರು ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಗ್ನಿಶಾಮ ಠಾಣೆಯಲ್ಲಿ ಠಾಣಾಧಿಕಾರಿ ದಯಾನಂದ ಗೌಡ ಉಭಯ ಸಂತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಭಯ ಸಮುದಾಯದ ಪ್ರಮುಖರಾದ ಶೇಖರಪ್ಪ, ಶ್ರೀಹರಿ, ನಾಗರಾಜ ಹಳೇಕೋಟಿ, ಶ್ರೀನಾಥ್ ಈಡಿಗೇರ್, ಜೆ.ಶ್ರೀನಿವಾಸ್, ಸತ್ಯನಾರಾಯಣ, ರವಿಕುಮಾರ್, ಪಿಲ್ಲಿ ರಾಮಕೃಷ್ಣ ವೆಂಕಟೇಶ್ವರರಾವ್, ಜೆ.ಕುಮಾರ್, ವೆಂಕಟರಮಣ, ಶ್ಯಾಮಣ್ಣ ಯತ್ನಟ್ಟಿ, ನಾರಾಯಣ ಈಡಿಗೇರ್, ಗೋವಿಂದರಾಜ್, ಮೈಲಾಪುರ ಅಪ್ಪಣ್ಣ, ಜಲವಾಡಗಿ ಶೀನು, ಸಂದೀಪ್ ಈ, ಹುಸೇನ್ ಮೈಲಾಪುರ, ಸಂದೀಪ್ ಬೇವಿನಾಳ, ಮಂಜುನಾಥ್ ಈ, ನಾಗಪ್ಪ, ರಾಘವೇಂದ್ರ ಈ, ಬಸಲಿಂಗ, ಶ್ರೀಕಾಂತ್ ಈಡಿಗೇರ್, ಯತ್ನಟ್ಟಿ ಚಿದಾನಂದಪ್ಪ, ವೆಂಕಟೇಶ್ ಈಡಿಗೇರ್, ಮಧುಕೇಶ್ ಈಡಿಗೇರ್, ಭೀಮಲಿಂಗ ಹಾಲಸಮುದ್ರ, ವೆಂಕಟೇಶ್ ಬೂದಗುಂಪಾ, ಶರಣಪ್ಪ ಈಡಿಗೇರ್, ಯಮನೂರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net