ಕುಲಕ್ಕೆ ಬಡತನ ಬಾರದಿರಲಿ ಎಂದು ವರವಿತ್ತ ಭಕ್ತೆ

ಕನಕಗಿರಿಯ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಚಂದ್ರಹಾಸ ರೆಡ್ಡಿ, ವೆಂಕಟೇಶ್ ರೆಡ್ಡಿ, ಗಣೇಶ ರೆಡ್ಡಿ, ರಾಮಂಜನೇಯ ರೆಡ್ಡಿ, ಹನುಮಂತರೆಡ್ಡಿ ಇತರರಿದ್ದರು.
ಕನಕಗಿರಿಯ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಚಂದ್ರಹಾಸ ರೆಡ್ಡಿ, ವೆಂಕಟೇಶ್ ರೆಡ್ಡಿ, ಗಣೇಶ ರೆಡ್ಡಿ, ರಾಮಂಜನೇಯ ರೆಡ್ಡಿ, ಹನುಮಂತರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವರವಿತ್ತ ಭಕ್ತೆ

ಕುಲಕ್ಕೆ ಬಡತನ ಬಾರದಿರಲಿ ಎಂದು ವರವಿತ್ತ ಭಕ್ತೆ

ಕನಕಗಿರಿ: ತಮಗೆ ತೊಂದರೆ ನೀಡಿದವರಿಗೂ ಹಿತ ಬಯಸಿದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಎಲ್ಲರಿಗೂ ಆದರ್ಶ ಆಗಿದ್ದಾರೆ ಎಂದು ಹೇಮ ವೇಮ ರೆಡ್ಡಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮರೆಡ್ಡಿ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮನ ಭಕ್ತಿಗೆ ಮೆಚ್ಚಿದ ಶಿವ ಮಲ್ಲಿಕಾರ್ಜುನ ಪ್ರತ್ಯಕ್ಷವಾಗಿ ಏನು ವರಬೇಕು ಕೇಳು ಎಂದಾಗ ಮಲ್ಲಮ್ಮ ತನ್ನ ಕುಲಕ್ಕೆ ಬಡತನ ಬಾರದಿರಲಿ, ಮಲ್ಲಿಕಾರ್ಜುನನಿಗೆ ಪೂಜೆ, ಜಾತ್ರೆ ಮತ್ತು ಉತ್ಸವಗಳು ನಿರಂತರ ನಡೆಯಬೇಕು ಎಂದು ಕೇಳಿದಾಗ ಆಕೆಯ ಇಚ್ಛೆಗೆ ವರ ನೀಡುತ್ತಾನೆ.
ಆದರೆ, ಸಂಪತ್ತಿಗೆ ಸೊಕ್ಕಬೇಡಿ, ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನ ಮಾಡುವುದರ ಮೂಲಕ ತನ್ನ ಬಳಗದವರು ದಾನಗುಣ ಬೆಳೆಸಿಕೊಳ್ಳಬೇಕು ಎಂದು ಬುದ್ಧಿ ಹೇಳಿದ್ದಾಳೆ. ಇಂಥ ಮಹಾಸಾಧ್ವಿ ಕುಟುಂಬದಿಂದ ಅನುಭವಿಸಿದ ಕಷ್ಟಗಳನ್ನು ಮೆಟ್ಟಿ ನಿಂತು ಮಹಿಳೆಯರಿಗೆ ಆದರ್ಶವಾಗಿದ್ದಾಳೆ ಎಂದರು.
ಪ್ರಮುಖರಾದ ಅಯ್ಯನಗೌಡ ಆಳ್ಳಳ್ಳಿ, ರಮೇಶ್ ರೆಡ್ಡಿ ಓಣಿಮನಿ, ವೆಂಕಟೇಶ್ ರೆಡ್ಡಿ, ಗಣೇಶ ರೆಡ್ಡಿ, ರಾಮಂಜನೇಯ ರೆಡ್ಡಿ, ಪ್ರಹಲಾದ ರೆಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net