ಸಿಆರ್‌ಪಿ ಲೆಂಕಪ್ಪ ವಾಲಿಕಾರ ಮಾತನಾಡಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಬೆಳಗ್ಗೆ 6.30ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಭಾತ್‌ಪೇರಿ ನಡೆಯಲಿದ್ದು, 8.30ರೊಳಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ತಲುಪಿ ನಂತರ ಶಾಲೆಗಳಲ್ಲಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು. ಶಿಕ್ಷಕರಾದ ರಾಜಕುಮಾರ ನಾಯಕ್, ಬಸವರಾಜೇಶ್ವರಿ ಸಜ್ಜನ, ಭಾರತಿ ದೇಸಾಯಿ, ಪ್ರಕಾಶ ಹಿರೇಮಠ, ಶರಣಪ್ಪ ವಡ್ಡರ, ಬಸಪ್ಪ ಬಂಡಿವಡ್ಡರ, ಅನಿಲ್ ಸಂಗಮ, ಈರಣ್ಣ ಅಂಗಡಿ, ವಿಷ್ಣು ರಜಪೂತ, ಮೈಬೂಬಸಾಬ್ ಬಾಗವಾನ, ಹನುಮೇಶ ಗೊಲ್ಲರ ಇತರರಿದ್ದರು.