ಇದರಂತೆ ಕುಷ್ಟಗಿ ಪ್ರಕರಣದಲ್ಲಿ ರಾಜಮೊಹ್ಮದ್ ಅಬ್ದುಲ್ ರಹೆಮಾನ್, ಬಸವರಾಜ ಮಾರ್ಕಂಡೆಪ್ಪ ತರಲಕಟ್ಟಿ, ನವೀನ್ ಕುಮಾರ ಕಲಾಲ್ ಮತ್ತು ಬಸವರಾಜ ಅಂಗಡಿ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಷ್ಟಗಿ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಅಪ್ರಾಪ್ತ ಬಾಲಕನಿಗೆ ಮದ್ಯ, ಸಿಗರೇಟ್ ಸೇವಿಸುವಂತ ವಿಡಿಯೋ ಮಾಡಿ, ಬಹಿರಂಗ ಪಡಿಸುವ ಬಗ್ಗೆ ಬೆದರಿಕೆ ಹಾಕಿ ಮನೆಯಲ್ಲಿ ಆಭರಣಗಳನ್ನು ದೋಚುವಂತೆ ಮಾಡಿದ್ದಾರೆ. ಸನ್ಮಿತ್ರ ಯೋಜನೆ ಮೂಲಕ ಗಾಂಜಾ ಸೇವನೆಗಾರರನ್ನು ಸರಿದಾರಿಗೆ ತರಲಾಗುತ್ತಿದ್ದು, ಬಹುತೇಕ ನಿಯಂತ್ರಿಸಲಾಗಿದೆ. ಮನೆ ಕಳವು ಪ್ರಕರಣ ನಿಯಂತ್ರಣಕ್ಕೆ ಲಾಕಡ್ ಹೌಸ್ ಬೀಟ್ ಸಿಸ್ಟಮ್ ಜಾರಿಗೆ ತಂದಿದ್ದು, ಮನೆಗೆ ಬೀಗ ಹಾಕಿ ಹೋಗುವವರು ಪೊಲೀಸ್ ಗಮನಕ್ಕೆ ತಂದರೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಜೀವ ಉಳಿಸಲು ಹೆಲ್ಮೆಟ್ ಕಡ್ಡಾಯವಾಗಿದ್ದು, ಶೀಘ್ರವೇ ಅಭಿಯಾನ ಶುರು ಮಾಡಲಾಗುವುದು. ಅಪ್ರಾಪ್ತರ ಕೈಯಲ್ಲಿ ಬೈಕ್ ನೀಡುವುದು ಅಪರಾಧವಾಗಿದ್ದು, ಪಾಲಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.