ಕನಕರಿಯಲ್ಲಿ ಕೆಟ್ಟು ನಿಂತ ಬಸ್

ಕನಕಗಿರಿ ಬಸ್ ನಿಲ್ದಾಣದಲ್ಲಿ ಕೆಟ್ಟು ನಿಂತ ಬಸ್ ತಳ್ಳುತ್ತಿರುವ ಪ್ರಯಾಣಿಕರು.
ಕನಕಗಿರಿ ಬಸ್ ನಿಲ್ದಾಣದಲ್ಲಿ ಕೆಟ್ಟು ನಿಂತ ಬಸ್ ತಳ್ಳುತ್ತಿರುವ ಪ್ರಯಾಣಿಕರು.
Published on
ಕನಕಗಿರಿ: ಪಟ್ಟಣದ ಬಸ್ ನಿಲ್ದಾಣದಲ್ಲಿ ಗಂಗಾವತಿಗೆ ಹೋಗುತ್ತಿದ್ದ ಬಸ್ ಆರಂಭವಾಗದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಬೇಕಾಯಿತು.
ಕುಷ್ಟಗಿಯಿಂದ ಬೆಳಗ್ಗೆ 9.20ಕ್ಕೆ ಬಂದ ಬಸ್ ಕನಕಗಿರಿ ಬಸ್ ನಿಲ್ದಾಣದಲ್ಲಿ ಆರಂಭವಾಗಲಿಲ್ಲ . ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಬಸ್ ತಳ್ಳಿ ಆರಂಭಿಸಲು ಪ್ರಯತ್ನಿಸಿದರು. ಬಸ್ ನಿರ್ವಹಣೆ ಕೊರತೆಯಿಂದ ಈ ರೀತಿಯ ಸಮಸ್ಯೆಗಳು ಹಲವು ಬಾರಿ ಕಾಣಿಸಿಕೊಳ್ಳುತ್ತಿವೆ. ಇನ್ನು ಬೆಳಗಿನ ವೇಳೆಯಲ್ಲಿ ಬಸ್ ಸಂಚಾರ ಸಮಸ್ಯೆಯಿಂದ ಪ್ರಯಾಣಿಕರು ತೊಂದರೆಗೆ ಒಳಗಾಗಬೇಕಾಯಿತು.
ಸೆಲ್ಫ್ ಸ್ಟಾಟರ್ ಬಾರದ ಕಾರಣ ಪ್ರಾಮಾಣಿಕರ ಸಹಾಯ ಪಡೆಯಬೇಕಾಯಿತು. ಎಂದಿನಂತೆ ಎಲ್ಲ ಬಸ್‌ಗಳಿಗೂ ನಿಯಮಿತ ತಪಾಸಣೆ ನಡೆಯುತ್ತಿದೆ ಎಂದು ಸಂಚಾರ ನಿಯಂತ್ರಕ ಶ್ರೀರಾಮ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net