ಜುಲೈ 8ರ ಸಂಜೆ 4 ಗಂಟೆಯವರೆಗೆ ನಡೆದ ಪರಿಶೀಲನೆಯಲ್ಲಿ 46 ಗೈರು, 1,182 ಖಾಯಂ ಸ್ಥಳಾಂತರ, 1,421 ಮೃತರು, 759 ಡುಪ್ಲಿಕೇಟ್ ಹಾಗೂ 9 ಇತರೆ ಪ್ರಕರಣಗಳು ಸೇರಿ ಒಟ್ಟು 3,417 ಯುಇಎಫ್ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಮತದಾರರು ಸಲ್ಲಿಸಿರುವ 2,78,346 ಗಣತಿ ನಮೂನೆಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಬಿಎಲ್ಓಗಳಿಗೆ ತಲಾ 12 ಸಾವಿರ ರೂ. ಗೌರವಧನ ವಿತರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.