ಕೊಪ್ಪಳ : ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಅಂಗವಾಗಿ ಏ. 30ರಂದು 75 ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಿಎಸ್ಎಸ್ ಜಿಲ್ಲಾ ಖಜಾಂಚಿ ಗುಡುದಪ್ಪ ದೊಡ್ಡಮನಿ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಂದು ಮಧ್ಯಾಹ್ನ 12.-28 ಕ್ಕೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸರಳ ಸಾಮೂಹಿಕ ವಿವಾಹಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದ್ದು. ಮದುವೆ ಖರ್ಚಿನಿಂದ ಸಂಕಷ್ಟಕ್ಕೆ ಸಿಲುಕುವ ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೊಟ್ಟ ಮೊದಲು 1993-&94 ರಲ್ಲಿ ಕೇವಲ 5 ಬಡ ಹಿಂದುಳಿದವರ ಸಾಮೂಹಿಕ ವಿವಾಹದಿಂದ ಆರಂಭವಾದ ಈ ಕಾರ್ಯವು ಇಂದು ಸುಮಾರು 75 ವಿವಾಹಗಳನ್ನು ಆಯೋಜಿಸುವಂತಾಗಿದೆ. ಬರಿ ವಿವಾಹ ಮಾಡಿ ಬಿಡುವುದಷ್ಟೇ ಅಲ್ಲದೇ, ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ಎಸ್ಸಿ, ಎಸ್ಟಿ ನವಜೋಡಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿ ಜೋಡಿಗೆ ರೂ.50 ಸಾವಿರ ಸಹಾಯಧನ ದೊರೆಯಲಿದೆ. ಮಾಜಿ ದೇವದಾಸಿಯ ಮಕ್ಕಳ ವಿವಾಹಕ್ಕೂ ಸರ್ಕಾರದಿಂದ ವಿಶೇಷ ನೆರವು ನೀಡಲಾಗುತ್ತದೆ. ಕಳೆದ ವರ್ಷ ನವಜೋಡಿಗಳು ಕಣ್ಣುದಾನಕ್ಕೆ ಮುಂದಾಗಿದ್ದರೆ, ಈ ವರ್ಷ ದೇಹದಾನ ಜಾಗೃತಿ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ ಎಂದರು.