ಎರಡ್ಮೂರು ದಿನಗಳಲ್ಲಿ ಶೇ.50 ನೀರು ಬಿಡುಗಡೆ

ಹನುಮಸಾಗರ ಸಮೀಪದ ಬಾದಿಮನಾಳ ಕ್ರಾಸ್‌ನಲ್ಲಿ ರೈತರು ಕೈಗೊಂಡ ಧರಣಿ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಎಇಇ ದೇವೇಂದ್ರಪ್ಪ ಇಟ್ಟಂಗಿ ಮಂಗಳವಾರ ಭೇಟಿ ನೀಡಿ ಮಾತುಕತೆ ನಡೆಸಿದರು.
ಹನುಮಸಾಗರ ಸಮೀಪದ ಬಾದಿಮನಾಳ ಕ್ರಾಸ್‌ನಲ್ಲಿ ರೈತರು ಕೈಗೊಂಡ ಧರಣಿ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಎಇಇ ದೇವೇಂದ್ರಪ್ಪ ಇಟ್ಟಂಗಿ ಮಂಗಳವಾರ ಭೇಟಿ ನೀಡಿ ಮಾತುಕತೆ ನಡೆಸಿದರು.
Published on

ಹನುಮಸಾಗರ: 

ಕೆರೆಗಳಿಗೆ ನೀರು ಹರಿಸಲು ಒತ್ತಾಯಿಸಿ ಸಮೀಪದ ಬಾದಿಮನಾಳ ಕ್ರಾಸ್‌ನಲ್ಲಿ ರೈತರು ಕೈಗೊಂಡಿರುವ ಧರಣಿ ಸ್ಥಳಕ್ಕೆ ಮಂಗಳವಾರ ಸಣ್ಣ ನೀರಾವರಿ ಇಲಾಖೆ ಎಇಇ ದೇವೇಂದ್ರಪ್ಪ ಇಟ್ಟಂಗಿ ಭೇಟಿ ನೀಡಿ ಚರ್ಚಿಸಿದರು. 

ಹನುಮನಾಳ ಹೋಬಳಿ ವ್ಯಾಪ್ತಿಯ ಬಾದಿಮನಾಳ, ಜಹಗೀರಗುಡದೂರ, ಮಾವಿನಇಟಗಿ ಕೆರೆಗಳಿಗೆ ಎರಡ್ಮೂರು ದಿನಗಳಲ್ಲಿ ಶೇ. 50 ನೀರು ಬಿಡಲಾಗುವುದು ಎಂದು ಎಇಇ ಲಿಖಿತ ರೂಪದಲ್ಲಿ ಭರವಸೆ ನೀಡಿದರು. ಹೀಗಾಗಿ ರೈತರು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಮರದ ತುಂಡುಗಳನ್ನು ತೆರವುಗೊಳಿಸಿ, ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನಾ ಸ್ಥಳದಲ್ಲಿ ರಾತ್ರಿ ಭಜನೆ: ಕೆರೆಗಳಿಗೆ ನೀರು ತುಂಬಿಸುವಂತೆ ರೈತರು ಸೋಮವಾರ ಅಹೋರಾತ್ರಿ ಧರಣಿ ನಡೆಸಿದರು. ಕೋನಾಪುರ ಹಾಗೂ ಜಹಗೀರಗುಡದೂರ ಗ್ರಾಮದ ಭಜನಾ ಮಂಡಳಿಯರು ರಾತ್ರಿ ರೈತರ ಪ್ರತಿಭಟನೆಗೆ ಸಾಥ್ ನೀಡಿದರು. ಸಕಲ ವಾದ್ಯಗಳೊಂದಿಗೆ ರಾತ್ರಿಯಿಡಿ ರಸ್ತೆ ಮೇಲೆ ಕುಳಿತು ಭಜನೆ ಮಾಡಿದರು. 
ಹಾಲಿನ ಗಾಡಿಗೂ ದಾರಿ ಬಿಡಲಿಲ್ಲ: ಎರಡನೇ ದಿನ ಮಂಗಳವಾರ ಬೆಳಗ್ಗೆ ಧರಣಿ ಮುಂದುವರಿಸಿದ ರೈತರು ರಸ್ತೆ ಸಂಚಾರ ಬಂದ್ ಮಾಡುವಾಗ ರಾಬಕೊವಿ ಹಾಲಿನ ವಾಹನ ಬಂತು. 
ಆದರೆ, ಪ್ರತಿಭಟನಾಕಾರರು ಹಾಲಿನ ವಾಹನ ಮುಂದೆ ಬಿಡಲಿಲ್ಲ. ವಾಹನ ಇಲ್ಲೇ  ಇರಲಿ ಎಂದು ವಾಹನದ ಹಿಂದೆ-ಮುಂದೆ ಕುಳಿತರು. ಪೊಲೀಸರು ಹೇಳಿದರೂ ಕೇಳದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದಾರಿ ಬಿಡಿ ಎಂದ ದ್ವಿಚಕ್ರ ವಾಹನ ಸವಾರರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net