45ಲಕ್ಷ ದಾಖಲೆ ವಹಿವಾಟು

ಮೇಳದಲ್ಲಿ ಬಗೆ ಬಗೆಯ ದ್ರಾ ವಿಸಿದ ಮಹಿಳೆಯರು.
ಮೇಳದಲ್ಲಿ ಬಗೆ ಬಗೆಯ ದ್ರಾ ವಿಸಿದ ಮಹಿಳೆಯರು.
Published on

ಪ್ರಮುಖ ಮುಖ್ಯಾಂಶಗಳು

  • ಯರ್ಸಗುಂಬಾ ನೋಡಲು ಜನವೋ ಜನ
  • ಹಣ್ಣು ಪ್ರದರ್ಶನ-&ಮಾರಟ ಮೇಳಕ್ಕೆ ಅದ್ದೂರಿ ತೆರೆ
ಕೊಪ್ಪಳ : ಮಹಾ ಶಿವರಾತ್ರಿ ನಿಮಿತ್ತ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದ್ದ 9ನೇ ವರ್ಷದ ಹಣ್ಣು, ಜೇನು ಮತ್ತು ಅಣಬೆ ಮೇಳವು ಉತ್ತಮ ಯಶಸ್ಸಿನೊಂದಿಗೆ ಸೋಮವಾರ ಸಮಾರೋಪಗೊಂಡಿತು. ಐದು ದಿನಗಳಲ್ಲಿ ಬರೋಬ್ಬರಿ 45 ಲಕ್ಷ ರೂ. ಅಧಿಕ ವಹಿವಾಟು ನಡೆಸುವ ಮೂಲಕ ರೈತರು ಮತ್ತು ಗ್ರಾಹಕರ ನಡುವೆ ಭರವಸೆಯ ಸೇತುವೆಯಾಗಿದೆ.
ರೈತರಿಗಾಗಿ 25ಕ್ಕೂ ಹೆಚ್ಚು ಉಚಿತ ಮಳಿಗೆಗಳನ್ನು ಎರ್ಪಡಿಸಲಾಗಿತ್ತು. ದೇಶ ವಿದೇಶಗಳಲ್ಲಿನ 50ಕ್ಕೂ ಹೆಚ್ಚು ತಳಿಗಳ ಹಣ್ಣು ಮತ್ತು ಅಣಬೆಗಳನ್ನು ಪ್ರದರ್ಶಿಸಲಾಯಿತು. ಸುಮಾರು 30ಸಾವಿರಕ್ಕೂ ಅಧಿಕ ಗ್ರಾಹಕರು, ರೈತರು ಭೇಟಿ ನೀಡಿ ಮೇಳದಲ್ಲಿನ ವಿಶೇಷತೆಗಳನ್ನು ಕಣ್ತುಂಬಿಕೊಂಡರು.
ಈ ಬಾರಿ ಮೇಳದ ಕೇಂದ್ರ ಬಿಂದುವಾಗಿದ್ದು ಜಗತ್ತಿನ ಅತ್ಯಂತ ದುಬಾರಿ ಅಣಬೆ ಎಂದೇ ಖ್ಯಾತಿ ಯರ್ಸಗುಂಬಾ. ಒಂದು ಕೆ.ಜಿ.ಗೆ 15 ಲಕ್ಷ ರೂ. ಬೆಲೆ ಬಾಳುವ, ಹಿಮಾಲಯದ ಎತ್ತರದ ಪ್ರದೇಶದಲ್ಲಿ ಬೆಳೆಯುವ ಈ ಹಿಮಾಲಯನ್​ ವಯಾಗ್ರಾವನ್ನು ನೋಡಲು ಜನಸ್ತೋಮವೇ ಹರಿದು ಬಂದಿತ್ತು. ಕ್ಯಾನ್ಸರ್​ ವಿರೋಧಿ ಗುಣ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಅಣಬೆಯ ಬಗ್ಗೆ ರೈತರು ಮತ್ತು ಸಾರ್ವಜನಿಕರು ಕುತೂಹಲದಿಂದ ಮಾಹಿತಿ ಪಡೆದರು. ಇದರೊಂದಿಗೆ 10ಕ್ಕೂ ಹೆಚ್ಚು ತಳಿಯ ಅಣಬೆಗಳು ಪ್ರದರ್ಶನದಲ್ಲಿದ್ದವು.
ಕೇವಲ ಹಸಿ ಅಣಬೆ ಮಾತ್ರವಲ್ಲದೆ, ಅಣಬೆಯಿಂದ ತಯಾರಿಸಿದ ಬಿಸ್ಕೆಟ್​, ಚಕ್ಕಲಿ, ಉಪ್ಪಿನಕಾಯಿ ಹಾಗೂ ಮಸಾಲ ಪುಡಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜೇನು ವಿಭಾಗದಲ್ಲಿ 3 ಟನ್​ ಜೇನುತುಪ್ಪದ ಜೊತೆಗೆ ಜೇನಿನ ಮೇಣದಿಂದ ತಯಾರಿಸಿದ ಲಿಪ್​ಸ್ಟಿಕ್​, ಸೋಪ್​ ಹಾಗೂ ಬಾಮ್​ಗಳು ಗ್ರಾಹಕರನ್ನು ಸೆಳೆದವು. ಮಶ್ರೂಮ್​ ಮಂಚೂರಿ, ಪೆಪ್ಪರ್​ ಡೆ ನಂತಹ ಖಾದ್ಯಗಳು ಜನರ ನಾಲಿಗೆಗೆ ರುಚಿ ನೀಡಿದವು.

ಹಣ್ಣುಗಳ ಲೋಕ

ಮೇಳದಲ್ಲಿ ಹಣ್ಣುಗಳ ಮಾರಾಟ ಜೋರಾಗಿತ್ತು. ವಿಶೇಷವಾಗಿ ಹಳದಿ ಮತ್ತು ಕೆಂಪು ತಿರುಳಿನ ಕಲ್ಲಂಗಡಿ ಹಣ್ಣುಗಳಿಗೆ ಭಾರಿ ಬೇಡಿಕೆ ಕೇಳಿಬಂತು. ಮೇಳದಲ್ಲಿ ಒಟ್ಟು 30 ಟನ್​ ಕಲ್ಲಂಗಡಿ. 20 ಟನ್​ ಕರಬೂಜ. 5 ಟನ್​ ದಾಳಿಂಬೆ ಹಾಗೂ 8 ಟನ್​ ದ್ರಾಕ್ಷಿ ಸೇರಿದಂತೆ ಅಂಜೂರ, ಪೇರಲ, ಬಾಳೆ ಹಾಗೂ ಡ್ರಾಗನ್​ ಫ್ರೂಟ್ಸ್​ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು. ಸ್ಥಳದಲ್ಲೇ ಹಣ್ಣುಗಳನ್ನು ಕತ್ತರಿಸಿ ಸವಿಯುವ ವ್ಯವಸ್ಥೆಯು ಸಹ ಇತ್ತು. ಸುಮಾರು 7 ಟನ್​ ಕಲ್ಲಂಗಡಿಯನ್ನು ಗ್ರಾಹಕರು ಮೇಳದಲ್ಲೇ ಸವಿದರು.
"

ಸುಮಾರು ಐದು ದಿನಗಳ ಈ ಹಣ್ಣು ಪ್ರದರ್ಶನ -ಮಾರಾಟ ಮೇಳದಲ್ಲಿ ಸಾಕಷ್ಟು ರೈತರು, ಮಹಿಳೆಯರು ಬಂದು ಹಿಮಾಲಯದ ಅತೀ ಎತ್ತರದ ಪ್ರದೇಶದಲ್ಲಿ ಬೆಳೆಯುವ ವಯಾಗ್ರ ಅಣಬೆಯನ್ನು ಕಂಡು ಆಶ್ಚರ್ಯ ಚಕಿತರಾದರು. 45 ಲಕ್ಷ ರೂ.ವಹಿವಾಟು ನಡೆದಿದೆ. ಸುಮಾರು 7 ಟನ್​ ಕಲ್ಲಂಗಡಿ ಹಣ್ಣನ್ನು ನೋಡುಗರು ಸ್ಥಳದಲ್ಲೇ ಸವಿದರು.

"

ಇಲಾಖೆಯ ಸಹಾಯಧನ ಪಡೆದು ಬೆಳೆದ ನಮ್ಮ ಅಣಬೆಗೆ ಈ ಮೇಳವು ಉತ್ತಮ ಮಾರುಕಟ್ಟೆ ಒದಗಿಸಿದೆ. ಗ್ರಾಹಕರಿಂದ ನೇರ ಬೇಡಿಕೆ ಬರುತ್ತಿರುವುದು ಸಂತಸ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net