ನೆಲಕ್ಕುರುಳಿದ 400 ಕೆ.ವಿ. ವಿದ್ಯುತ್ ಗೋಪುರ

ಯಲಬುರ್ಗಾ ತಾಲೂಕಿನ ಸಂಗನಾಳ-ಹಾಳಕೇರಿ ರಸ್ತೆ ಮಧ್ಯೆ ಹಾದು ಹೋದ 400 ಕೆ.ವಿ. ಸಾಮರ್ಥ್ಯದ  ವಿದ್ಯುತ್ ಗೋಪುರ ಹಾಗೂ ಉನ್ನತ ಮಟ್ಟದ ತಂತಿ ಮಳೆ-ಗಾಳಿಗೆ ನೆಲಕ್ಕುರುಳಿರುವುದು.
ಯಲಬುರ್ಗಾ ತಾಲೂಕಿನ ಸಂಗನಾಳ-ಹಾಳಕೇರಿ ರಸ್ತೆ ಮಧ್ಯೆ ಹಾದು ಹೋದ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಗೋಪುರ ಹಾಗೂ ಉನ್ನತ ಮಟ್ಟದ ತಂತಿ ಮಳೆ-ಗಾಳಿಗೆ ನೆಲಕ್ಕುರುಳಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಂಗನಾಳ-ಹಾಳಕೇರಿ ಮಧ್ಯೆ ಘಟನೆ
  • ಕಳಪೆ ಕಾಮಗಾರಿ ಎಂದು ರೈತರ ಆಕ್ರೋಶ
ಯಲಬುರ್ಗಾ: ತಾಲೂಕಿನ ಸಂಗನಾಳ-ಹಾಳಕೇರಿ ರಸ್ತೆ ಮಧ್ಯೆ ಹಾದು ಹೋದ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಗೋಪುರ ಹಾಗೂ ಅದರ ತಂತಿ ಶನಿವಾರ ಮಧ್ಯರಾತ್ರಿ ಬೀಸಿದ ಮಳೆ-ಗಾಳಿಗೆ ನೆಲಕ್ಕುರುಳಿದೆ.
ರಸ್ತೆ ಮಧ್ಯೆ ಬೃಹತ್ ಗಾತ್ರದ ಗೋಪುರ ಉರುಳಿ ಬಿದ್ದ ಪರಿಣಾಮ ಈ ಮಾರ್ಗದ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸುದ್ದಿ ತಿಳಿಯುತ್ತಲೇ ಸಂಗನಾಳ, ಹಾಳಕೇರಿ ಸೇರಿದಂತೆ ಸುತ್ತ್ತಲಿನ ಗ್ರಾಮಗಳ ರೈತರು ಸ್ಥಳಕ್ಕೆ ಧಾವಿಸಿ ಕಳಪೆ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆ ಮಾರ್ಗವಾಗಿ ಪ್ರತಿದಿನ ನೂರಾರು ರೈತರು ಜಮೀನುಗಳಿಗೆ ತೆರಳುತ್ತಾರೆ. ಟ್ರ್ಯಾಕ್ಟರ್, ಎತ್ತಿನಬಂಡಿ, ಬೆಳೆ ಸಾಗಣೆ ವಾಹನಗಳು ಹಾಗೂ ಕೃಷಿ ಯಂತ್ರೋಪಕರಣಗಳು ಸಂಚರಿಸುತ್ತವೆ. ಹಗಲು ವೇಳೆ ಈ ಕಂಬ ಉರುಳಿ ಬಿದ್ದಿದ್ದರೆ ರೈತರು, ಕೂಲಿ ಕಾರ್ಮಿಕರು ಅಥವಾ ಶಾಲಾ ಮಕ್ಕಳು ಬಲಿಯಾಗುತ್ತಿದ್ದರು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಘಟನೆಯ ಪರಿಣಾಮ ಕೆಲಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ನೀರಾವರಿ ಪಂಪ್‌ಸೆಟ್‌ಗಳಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗಲಿಲ್ಲ. ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವ ಎದುರಿಸುತ್ತಿರುವ ರೈತರಿಗೆ ಇದು ಮತ್ತೊಂದು ದೊಡ್ಡ ಹೊಡೆತ ನೀಡಿದೆ. ಒಂದು ಕಡೆ ಮಳೆ ಇಲ್ಲದೆ ಬೆಳೆ ಒಣಗುತ್ತಿದೆ. ಇನ್ನೊಂದು ಕಡೆ ವಿದ್ಯುತ್ ಸಮಸ್ಯೆಯಿಂದ ಪಂಪ್‌ಸೆಟ್‌ಗಳು ಕೆಲಸ ಮಾಡುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net