ಕನಕಗಿರಿಯಲ್ಲಿ ತಾಲೂಕು ಬಣಜಿಗ ಸಮಾಜದಿಂದ ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಮನವಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸಂತೋಷ ಹಾದಿಮನಿ, ಪಪ ಸದಸ್ಯ ಸುರೇಶ ಗುಗ್ಗಳಶೆಟ್ರ, ಯುವ ಘಟಕದ ಗೌರವಾಧ್ಯಕ್ಷ ರಾಚಪ್ಪ ಪ್ರಭುಶೆಟ್ಟರ್, ಅಧ್ಯಕ್ಷ ಚಂದ್ರು ಚೋಳಿನ್ ಇತರರಿದ್ದರು.
ಕನಕಗಿರಿ: ಸರ್ಕಾರಿ ನೌಕರಿಯಲ್ಲಿ ಬಣಜಿಗ ಸಮುದಾಯವರಿಗೆ ರಾಜ್ಯ ಸರ್ಕಾರ 2ಎ ಪ್ರವರ್ಗ ಮೀಸಲಾತಿಯನ್ನು ನೀಡಬೇಕು ಎಂದು ಆಗ್ರಹಿಸಿ ತಾಲೂಕು ಬಣಜಿಗ ಸಮಾಜದಿಂದ ತಹಸೀಲ್ದಾರ್ ಚಂದ್ರಶೇಖರ ಗಾಳಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷ ಪ್ರಶಾಂತ ಪ್ರಭುಶೆಟ್ಟರ್ ಮಾತನಾಡಿ, ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ 2ಎ ಮೀಸಲಾತಿಯಿದೆ. ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸುರಜ್ ಗೋವಿಂದರಾಜು ಏಕ ಸದಸ್ಯ ಪೀಠ ಬಣಜಿಗ ಸಮುದಾಯವನ್ನು ಉದ್ಯೋಗ ಉದ್ದೇಶದಿಂದ ಪ್ರವರ್ಗ ಡಿ ಹಾಗೂ ಶಿಕ್ಷಣ ಉದ್ದೇಕ್ಕಾಗಿ ಪ್ರವರ್ಗ ಬಿ ಅಡಿ ವರ್ಗಿಕರಿಸಿರುವುದು ಪರಿಚ್ಚೇದದ ಉಲ್ಲಂಘನೆಯಾಗಿದೆ.
ಆದ್ದರಿಂದ ಬಣಜಿಗ ಸಮುದಾಯವನ್ನು ಪರಿಚ್ಚೇದ 16(4) ಅಡಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿ ಮರು ವರ್ಗಿಕರಿಸಬೇಕು ಎಂದು ಆದೇಶಿಸಿದ್ದು, ಅದರ ಪ್ರಕಾರ ಉದ್ಯೋಗದಲ್ಲಿ 2ಎ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿಕಟಪೂರ್ವ ಅಧ್ಯಕ್ಷ ಶರಣಪ್ಪ ಭತ್ತದ್, ಪ್ರಧಾನ ಕಾರ್ಯದರ್ಶಿ ಸಂತೋಷ ಹಾದಿಮನಿ, ಪಪ ಸದಸ್ಯ ಸುರೇಶ ಗುಗ್ಗಳಶೆಟ್ರ, ಯುವ ಘಟಕದ ಗೌರವಾಧ್ಯಕ್ಷ ರಾಚಪ್ಪ ಪ್ರಭುಶೆಟ್ಟರ್, ಅಧ್ಯಕ್ಷ ಚಂದ್ರು ಚೋಳಿನ್, ಪ್ರಮುಖರಾದ ಶರಣಪ್ಪ ಕಲಕೇರಿ, ಶಿವಕುಮಾರ ಕೋರಿ, ವೀರೇಶ್ ಬಳಿಗಾರ, ವೀರೇಶ್ ಕೋರಿಶೆಟ್ಟರ್ ಇತರರಿದ್ದರು.