ಮತದಾರರ ಪಟ್ಟಿಯಿಂದ 12,202 ಜನ ಹೊರಕ್ಕೆ

ಕಾರಟಗಿ ತಹಸಿಲ್ ಕಚೇರಿಯಲ್ಲಿ ಮತದಾರರ ಕರಡು ಪಟ್ಟಿ ಪರಿಶೀಲನೆ ಸಭೆ ಮತದಾರರ ಉಪನೋಂದಣಾಧಿಕಾರಿ ಟಿ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಉಮೇಶ ಭಂಗಿ, ಅಯ್ಯಪ್ಪ ಉಪ್ಪಾರ, ದೇವರಾಜ ನಾಯಕ, ಬಸವರಾಜ ಎತ್ತಿನಮನಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ, ತಾ.ಪಂ.ಒ ಲಕ್ಷ್ಮೀದೇವಿ ಇದ್ದರು.
ಕಾರಟಗಿ ತಹಸಿಲ್ ಕಚೇರಿಯಲ್ಲಿ ಮತದಾರರ ಕರಡು ಪಟ್ಟಿ ಪರಿಶೀಲನೆ ಸಭೆ ಮತದಾರರ ಉಪನೋಂದಣಾಧಿಕಾರಿ ಟಿ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಉಮೇಶ ಭಂಗಿ, ಅಯ್ಯಪ್ಪ ಉಪ್ಪಾರ, ದೇವರಾಜ ನಾಯಕ, ಬಸವರಾಜ ಎತ್ತಿನಮನಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ, ತಾ.ಪಂ.ಒ ಲಕ್ಷ್ಮೀದೇವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪನೋಂದಣಾಧಿಕಾರಿ ಟಿ.ಕೃಷ್ಣಮೂರ್ತಿ ಮಾಹಿತಿ
  • ಕಾರಟಗಿ ರಾಜಕೀಯ ಮುಖಂಡರ-ಅಧಿಕಾರಿಗಳ ಸಭೆ
ಕಾರಟಗಿ: ಎಸ್‌ಐಆರ್ ಕಾರ್ಯ ಪೂರ್ಣಗೊಂಡಿದ್ದು, ತಾಲೂಕಿನಲ್ಲಿ ಶೇ.89.81 ಮತದಾರರು ನೇರ ಎಸ್‌ಐಆರ್ ಪ್ರಕ್ರಿಯೆ ಪರಿಶೀಲನೆಗೆ ಒಳಗಾಗಿದ್ದಾರೆ. ಇದರಲ್ಲಿ ಕನಕಗಿರಿ ಕ್ಷೇತ್ರ ವ್ಯಾಪ್ತಿಯ ಮರಳಿ ಹೋಬಳಿಯೂ ಸೇರಿದೆ ಎಂದು ಜಿ.ಪಂ.ಉಪಕಾರ್ಯದರ್ಶಿ ಹಾಗೂ ಮತದಾರರ ಉಪನೋಂದಣಾಧಿಕಾರಿ ಟಿ.ಕೃಷ್ಣಮೂರ್ತಿ ತಿಳಿಸಿದರು.
ತಹಸಿಲ್ ಕಚೇರಿಯಲ್ಲಿ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮೊದಲ ಹಂತ ಸೋಮವಾರ ಮುಗಿದಿದೆ. ಕ್ಷೇತ್ರದ ಒಟ್ಟು 2,32,342 ಮತದಾರರ ಪೈಕಿ 4,880 ಜನರು ಮೃತರಾಗಿದ್ದಾರೆ. ಮತದಾರರ ಪಟ್ಟಿಯಿಂದ ಒಟ್ಟು 12,202 ಜನ ರದ್ದಾಗಿವೆ. ಇದರಲ್ಲಿ 2,08,666 ಮತದಾರರು ಡಿಜಿಟಲೀಕರಣಗೊಂಡಿದ್ದರು. ಕಾರಟಗಿ ತಾಲೂಕಿನಲ್ಲಿ ಒಟ್ಟು 1,05,384 ಮತದಾರರು ಇದ್ದು, ಈ ಪೈಕಿ 93,182 ಜನ ಡಿಜಿಟಲೀಕರಣಗೊಂಡಿದ್ದಾರೆ. 22 ಜನ ಗೈರು, 5,092 ಒಂದಕ್ಕಿಂತ ಹೆಚ್ಚು ಕಡೆ ಮತ ಹೊಂದಿದವರನ್ನು ವರ್ಗಾಯಿಸಲಾಗಿದೆ. 2,513 ಜನ ಮೃತರನ್ನು ಗುರುತಿಸಲಾಗಿದೆ. ಇನ್ನೂ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಗುರುತು, ಶಾಶ್ವತ ಸ್ಥಳಾಂತರಗೊಂಡವರನ್ನು, ಬೇರೆ ಕಡೆ ನೊಂದಣಿಯಾದವರನ್ನು, ಗೈರು, ಮೃತಪಟ್ಟವರು ಸೇರಿ ಒಟ್ಟು 12,202 ಜನರನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ತಾಪಂ ಇಒ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಡಾ.ಸಾಬಣ್ಣ ಕಟ್ಟೆಕಾರ, ಶಿರಸ್ತೇದಾರ್ ಉಮಾಮಹೇಶ್ವರ, ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಉಮೇಶ ಭಂಗಿ, ಅಯ್ಯಪ್ಪ ಉಪ್ಪಾರ, ದೇವರಾಜ ನಾಯಕ, ಬಸವರಾಜ ಎತ್ತಿನಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net