ಜಿಲ್ಲೆಯ ಏಳು ತಾಲೂಕುಗಳ ರೈತರು ಸೇರಿದಂತೆ ವಿವಿಧ ಜಿಲ್ಲೆಗಳ 150ಕ್ಕೂ ಹೆಚ್ಚು ರೈತರು ಹಾಗೂ ರೈತ ಉತ್ಪಾದಕ ಸಂಘಗಳು ಭಾಗವಹಿಸಿ 30ಕ್ಕೂ ಹೆಚ್ಚು ಉಚಿತ ಮಳಿಗೆಗಳ ಮೂಲಕ ಮಾವು ಮಾರಾಟ ಮಾಡಿದರು. ಕೇಸರ್, ದಶಹರಿ, ರಸಪುರಿ, ಬೆನೆಶಾನ್, ಸ್ವರ್ಣರೇಖಾ, ಇಮಾಮ್ ಪಸಂದ್, ಮಲ್ಲಿಕಾ, ತೋತಾಪುರಿ ಸೇರಿದಂತೆ 15ಕ್ಕೂ ಹೆಚ್ಚು ತಳಿಯ ಹಣ್ಣುಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯಿತು.