₹ 1 ಲಕ್ಷ ಭದ್ರತಾ ಸೌಲಭ್ಯ

ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಛಾಯಗ್ರಾಹಕರ ಸಂಘದ ತಾಲೂಕು ಮಟ್ಟದ ವಿಶೇಷ ಸಭೆಯಲ್ಲಿ ಯೋಜನೆ ಮಾಹಿತಿ ಪತ್ರ ಬಿಡುಗಡೆ ಮಾಡಲಾಯಿತು. ರಾಜ್ಯ ನಿರ್ದೇಶಕ ರಾಜಶೇಖರ ಶ್ಯಾಗೋಟಿ, ತಾಲೂಕು ಅಧ್ಯಕ್ಷ ಷಡಕ್ಷರಯ್ಯ ಹಿರೇಮಠ, ಉಪಾಧ್ಯಕ್ಷ ಹುಸೇನಸಾಬ್ ಇತರರಿದ್ದರು.

Published on
ಗಂಗಾವತಿ: ಛಾಯಗ್ರಾಹಕರ ಸಂಘದ ಸದಸ್ಯರಿಗಾಗಿ ರೂಪಿಸಿದ ಆಸರೆ ಯೋಜನೆ ಸದಸ್ಯತ್ವ ನೋಂದಣಿಗಾಗಿ ನಗರದ ಶ್ರೀ ಚನ್ನಮಲ್ಲಿಕಾರ್ಜುನ ವಸತಿ ನಿಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಛಾಯಗ್ರಾಹಕರ ಸಂಘದ ತಾಲೂಕು ಮಟ್ಟದ ವಿಶೇಷ ಸಭೆಯಲ್ಲಿ ಸಂಘದ ಅಸ್ತಿತ್ವ, ಉದ್ದೇಶ, ಆಸರೆ ಯೋಜನೆ ವಿಶೇಷತೆ ಮತ್ತು ಸಂಘಟನಾತ್ಮಕ ಹೋರಾಟದ ಕುರಿತು ಚರ್ಚಿಸಲಾಯಿತು.
ಸಂಘದ ರಾಜ್ಯ ನಿರ್ದೇಶಕ ರಾಜಶೇಖರ ಶ್ಯಾಗೋಟಿ ಮಾತನಾಡಿ, ಸದಸ್ಯರಿಗಾಗಿ ರೂಪಿಸಿರುವ ಯೋಜನೆ ಪರಿಣಾಮಕಾರಿಯಾಗಿದ್ದು, ಒಂದು ಲಕ್ಷ ರೂ. ಭದ್ರತಾ ಸೌಲಭ್ಯ ಹೊಂದಿದೆ. ನೋಂದಾಯಿತ ಸದಸ್ಯರು ಮೃತಪಟ್ಟರೆ ಸಂಘದಿಂದ ಕುಟುಂಬಕ್ಕೆ ಒಂದು ಲಕ್ಷ ರೂ. ನೆರವು ನೀಡಲಾಗುವುದು ಎಂದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಷಡಕ್ಷರಯ್ಯ ಹಿರೇಮಠ, ಉಪಾಧ್ಯಕ್ಷ ಹುಸೇನಸಾಬ್, ಪದಾಧಿಕಾರಿಗಳಾದ ನಾಗರಾಜ್ ಕುಂಬಾರ, ಚಾಂದ್‌ಪಾಷಾ ಬಂಡ್ರಾಳ್, ಬಸವರಾಜಸ್ವಾಮಿ ಮರಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net