ಹಾತಿರಾಮ್​ ಬಾಬಾ ಕಟ್ಟೆ ಅಭಿವೃದ್ಧಿಗೆ 1 ಕೋಟಿ ಅನುದಾನ

ಕೊಪ್ಪಳ ತಾಲ್ಲೂಕಿನ ಬಹದ್ದೂರ್​ ಬಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ರಾಷ್ಟ್ರೀಯ ಬಂಜಾರ ಹೋಳಿ ಉತ್ಸವವನ್ನು ಶಾಸಕ ರಾವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಸಮುದಾಯದ ಗುರುಗಳಾದ ಸಿದ್ಧಲಿಂಗ ಮಹಾರಾಜ, ತೆಲಂಗಾಣದ ರಮೇಶಗಿರಿ ಮಹಾಸ್ವಾಮಿ, ವಿಪ ಸದಸ್ಯೆ ಹೇಮಲತಾ ನಾಯಕ ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್​, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ನಿವೃತ್ತ ಮುಖ್ಯ ಅಭಿಯಂತರ ಶಿವಾನಂದ,  ರವಿ ಕುರುಗೋಡ, ಚಾಂದಪಾಷಾ, ಕೂಪಳಗಡ್​ ಭಾದ್ದರ ಬಂಡಾ ಸೇವಾ ಟ್ರಸ್ಟ್​   ಭರತ್​ ನಾಯ್ಕ್​ ಇದ್ದರು.
ಕೊಪ್ಪಳ ತಾಲ್ಲೂಕಿನ ಬಹದ್ದೂರ್​ ಬಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ರಾಷ್ಟ್ರೀಯ ಬಂಜಾರ ಹೋಳಿ ಉತ್ಸವವನ್ನು ಶಾಸಕ ರಾವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಸಮುದಾಯದ ಗುರುಗಳಾದ ಸಿದ್ಧಲಿಂಗ ಮಹಾರಾಜ, ತೆಲಂಗಾಣದ ರಮೇಶಗಿರಿ ಮಹಾಸ್ವಾಮಿ, ವಿಪ ಸದಸ್ಯೆ ಹೇಮಲತಾ ನಾಯಕ ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್​, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ನಿವೃತ್ತ ಮುಖ್ಯ ಅಭಿಯಂತರ ಶಿವಾನಂದ, ರವಿ ಕುರುಗೋಡ, ಚಾಂದಪಾಷಾ, ಕೂಪಳಗಡ್​ ಭಾದ್ದರ ಬಂಡಾ ಸೇವಾ ಟ್ರಸ್ಟ್​ ಭರತ್​ ನಾಯ್ಕ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಘವೇಂದ್ರ ಹಿಟ್ನಾಳ ಘೋಷಣೆ
  • ಬಂಜಾರ ಸಂಸತಿ ಅನಾವರಣ
ಕೊಪ್ಪಳ : ತಾಲೂಕಿನ ಬಹದ್ದೂರ್​ ಬಂಡಿಯ ಹಾತಿರಾಮ್​ ಬಾಬಾ ಕ್ಷೇತ್ರದ ಅಭಿವೃದ್ಧಿಗೆ ಶೌಚಾಲಯ ಹೊರತುಪಡಿಸಿ 1 ಕೋಟಿ ಸಿಎಂ ಶಾಸಕರ ಅನುದಾನ, ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಬಂಜಾರ ಮಕ್ಕಳಿಗಾಗಿಯೇ ಪ್ರತ್ಯೇಕ ವಸತಿ ಶಾಲೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಕ್ಷಾತಿತವಾಗಿ ಒದಗಿಸಿ, ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡೋಣ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.
ತಾಲ್ಲೂಕಿನ ಬಹದ್ದೂರ್​ ಬಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ರಾಷ್ಟ್ರೀಯ ಬಂಜಾರ ಹೋಳಿ ಉತ್ಸವದಲ್ಲಿ ಮಾತನಾಡಿದರು.
ಬಂಜಾರ ಸಮಾಜದ ಇತಿಹಾಸ ಮತ್ತು ಪರಂಪರೆ ಅದ್ಭುತವಾಗಿದೆ. ಅವರ ಉಡುಗೆಯ ಮೂಲಕವೇ ಸಮಾಜವನ್ನು ಗುರುತಿಸುವಷ್ಟು ವಿಶಿಷ್ಟ ಸಂಸತಿ ಅವರದು. ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಈ ಸಮುದಾಯ, ಇತರರೊಂದಿಗೆ ಅನ್ಯೋನ್ಯವಾಗಿ ಬಾಳುವುದನ್ನು ಕಲಿಸಿಕೊಟ್ಟಿದೆ ಎಂದರು.
ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ಲಂಬಾಣಿ ಸಮುದಾಯಕ್ಕೆ ಬಹದ್ದೂರ್​ ಬಂಡಿ ಕ್ಷೇತ್ರವು ಮೆಕ್ಕಾ-ಮದೀನಾ ಅಥವಾ ಕಾಶಿಯಫಿ್ಟೇ ಪವಿತ್ರವಾದುದು. ಶಾಸಕರು ಕೇವಲ 1 ಕೋಟಿ ನೀಡಿದರೆ ಸಾಲದು, ಸಮುದಾಯದ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಬಂಜಾರ ಸಮುದಾಯಕ್ಕೆ ಕಸೂತಿ ಕಲೆ ದೈವದತ್ತವಾಗಿ ಬಂದಿದೆ ಜಿಲ್ಲೆಯಲ್ಲಿ ಶಾಸಕರು ಒಂದು ಬಂಜಾರ ಕಸುತಿ ಕೇಂದ್ರವನ್ನು ಆರಂಭಿಸಬೇಕು. ಇಲ್ಲಿನ ಸ್ಥಗಿತಗೊಂಡಿರುವ ಸಿಸಿ ರಸ್ತೆ ಕಾಮಗಾರಿ ಶೀಘ್ರ ಆರಂಭವಾಗಬೇಕು. ನನ್ನ ಅನುದಾನದಲ್ಲೂ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದರು.
ಬಂಜಾರ ಸಮುದಾಯದ ಸಾಂಪ್ರದಾಯಿಕ ಉಡುಗೆ-ತೊಡಿಗೆ, ನೃತ್ಯ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ರಾಷ್ಟ್ರೀಯ ಹೋಳಿ ಉತ್ಸವ ಅತ್ಯಂತ ಅದ್ದೂರಿಯಾಗಿ ಜರುಗಿತು. ಸಮುದಾಯದ ಆರಾಧ್ಯ ದೈವ ಹಾತಿರಾಮ್​ ಬಾಬಾ ತಪಸ್ಸು ಮಾಡಿದ ಕಟ್ಟೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಂಜಾರ ಸಂಸತಿಯ ವೈಭವವನ್ನು ಅನಾವರಣಗೊಳಿಸಲಾಯಿತು.
ಇಡೀ ಗ್ರಾಮವು ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿತ್ತು. ತೆಲಂಗಾಣ, ಹೈದರಾಬಾದ್​ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಜನರು ಸಾಂಪ್ರದಾಯಿಕ ಉಡುಗೆ ತೊಟ್ಟು ಬೆಳಿಗಿನ ಜಾವದ ತನಕ ಕುಣಿದು ಸಂಭ್ರಮಿಸಿದರು. ಹಾತಿರಾಮ್​ ಬಾಬಾ ಕಟ್ಟೆ ಪೂಜೆ ಮತ್ತು ಸಂತ ಸೇವಾಲಾಲ್​ ಸ್ಮರಣೆ ಕಾರ್ಯಕ್ರಮಗಳು ಜರುಗಿದವು.
ಸಮುದಾಯದ ಗುರುಗಳಾದ ಸಿದ್ಧಲಿಂಗ ಮಹಾರಾಜ, ತೆಲಂಗಾಣದ ರಮೇಶಗಿರಿ ಮಹಾಸ್ವಾಮಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್​, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ನಿವೃತ್ತ ಮುಖ್ಯ ಅಭಿಯಂತರ ಶಿವಾನಂದ,  ರವಿ ಕುರುಗೋಡ, ಚಾಂದಪಾಷಾ, ಕೂಪಳಗಡ್​ ಭಾದ್ದರ ಬಂಡಾ ಸೇವಾ ಟ್ರಸ್ಟ್​   ಭರತ್​ ನಾಯ್ಕ್​, ಆಲ್​ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಪಿ. ಲಕ್ಷ$್ಮಣ ನಾಯ್ಕ್​, ಕರ್ನಾಟಕ ಪ್ರದೇಶ ಬಂಜಾರ ಲಮಾಣಿ ಸೇವಾ ಸಂಘದ ಜಿಲ್ಲಾಧ್ಯಕ್ಷ ಯಮನೂರಪ್ಪ ನಾಯ್ಕ್​, ಪರಸ್ಪರ ನಾಯ್ಕ್​ ಕಲಕೇರಿ, ರಾಮಪ್ಪ ಜಾದವ್​ ಇತರರಿದ್ದರು.
"

ಬಹದ್ದೂರ್​ ಬಂಡಿ ಹಾತಿರಾಮ್​ ಬಾಬಾ ಕಟ್ಟೆ ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಪುಣ್ಯಕ್ಷೇತ್ರ. ಇದರ ಉನ್ನತಿಕರಣಕ್ಕೆ ಕನಿಷ್ಠ 5 ಕೋಟಿ ರೂ. ಅನುದಾನದ ಅಗತ್ಯವಿದೆ. ಒಳ ಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಅನಿವಾರ್ಯವಾದರೆ ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ

ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಸಂಭ್ರಮದ ಹಬ್ಬರ

ಜಿಲ್ಲೆಯಲ್ಲಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮ ಮಡುಗಟ್ಟಿದೆ. ನಗರದ ಮೂಲೆ ಮೂಲೆಯಲ್ಲೂ ಬಣ್ಣದ ಓಕುಳಿಯಾಟಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಜನರಲ್ಲಿ ಹಬ್ಬದ ಉತ್ಸಾಹ ಮುಗಿಲು ಮುಟ್ಟಿದೆ. ಮಂಗಳವಾರ ರಾತ್ರಿ ನಗರದ ವಿವಿಧೆಡೆ ಶಾಸ್ತ್ರೋಕ್ತವಾಗಿ ಕಾಮನನ್ನು ಸುಡುವ ಮೂಲಕ ಹೋಳಿ ಆಚರಣೆಗೆ ಅದ್ಧೂರಿ ಚಾಲನೆ ನೀಡಲಾಯಿತು. ಕೆಟ್ಟದ್ದನ್ನು ಸುಟ್ಟು ಒಳ್ಳೆಯದನ್ನು ಸ್ವಾಗತಿಸುವ ಈ ಸಂಪ್ರದಾಯ ಆಚರಣೆ ಮಾಡಲಾಗುತ್ತದೆ.
ಕಳೆದ ವರ್ಷದ ಯಶಸ್ಸಿನ ಬೆನ್ನಲ್ಲೇ ಈ ಬಾರಿಯೂ ಜಿಲ್ಲಾ ಅಥ್ಲೆಟಿಕ್​ ಅಸೋಸಿಯೇಷನ್​ ವತಿಯಿಂದ ಇಂದು (ಮಾ. 4) ತಾಲೂಕು ಕ್ರೀಡಾಂಗಣದಲ್ಲಿ ಬೃಹತ್​ ಹೋಳಿ ಆಚರಣೆ ಹಮ್ಮಿಕೊಳ್ಳಲಾಗಿದೆ.ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ರೈನ್​ ಡ್ಯಾನ್ಸ್​ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಎಲ್ಲರಿಗೂ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಚರ್ಮದ ರಕ್ಷಣೆಗಾಗಿ ಈ ಬಾರಿ ಬರುವ ಎಲ್ಲಾ ಯುವಕ-ಯುವತಿಯರಿಗೆ ವಿಷಕಾರಿ ರಾಸಾಯನಿಕ ಮುಕ್ತವಾದ ಆರ್ಗಾನಿಕ್​ ಬಣ್ಣಗಳನ್ನು ನೀಡಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net