

ಕೊಪ್ಪಳ: ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಿ. ಇನ್ನೊಬ್ಬರು ಮಾಡಲಿ ಎಂಬುದಕ್ಕಿಂತ ನಮ್ಮಿಂದಲೇ ಅಭಿಯಾನ ಆರಂಭವಾಗಲಿ ಎಂದು ಜಿಲ್ಲಾ ಎಸ್ಬಿಎಂ ಸಮಾಲೋಚಕಿ ಬಸಮ್ಮ ಹುಡೇದ್ ಹೇಳಿದರು.
ತಾಲೂಕಿನ ಓಜನಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಹೀ ಸೇವಾ ಭಾಗವಾಗಿ ಸಂಜೀವಿನಿ ಮಹಿಳಾ ಸಂದ ಸದಸ್ಯರಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ನಿಮ್ಮ ಕುಟುಂಬದ ಆರೋಗ್ಯ ಕಾಳಜಿ ಮಾಡಿ. ವೈಯಕ್ತಿಕ ಸ್ವಚ್ಛತೆ ಜತೆಗೆ, ಮನೆ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ. ಮನೆಯಲ್ಲಿ ಉತ್ಪತ್ತಿಯಾಗುವ ಒಣ, ಹಸಿ ಕಸ ವಿಂಗಡಿಸಿ. ತರಕಾರಿ, ಇನ್ನಿತರ ವಸ್ತು ಕೊಳ್ಳಲು ಮಾರುಕಟ್ಟೆಗೆ ಹೋಗುವಾಗ ಕೈ ಚೀಲ ಕೊಂಡೊಯ್ಯಿರಿ. ಗ್ರಾಪಂ, ಶಾಲೆ, ಅಂಗನವಾಡಿ, ದೇವಸ್ಥಾನ. ಮಸೀದಿ, ಮಂದಿರ, ಕಲ್ಯಾಣಿ, ಬಾವಿ ಸೇರಿ ಸಾರ್ವಜನಿಕ ಸ್ಥಗಳಲ್ಲಿ ಶುಭ್ರತೆ ಕಾಪಾಡಿ. ಶ್ರಮದಾನ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿ ಸ್ವಚ್ಛತೆಯೇ ಸೇವೆ ಎನ್ನುವ ಪದಕ್ಕೆ ಅರ್ಥ ಕಲ್ಪಿಸುವಂತೆ ತಿಳಿಸಿದರು.
ಎಸ್ಬಿಎಂ ಐಇಸಿ ಸಂಯೋಜಕ ಮಾರುತಿ ನಾಯಕ, ತಾಲೂಕು ಸಂಯೋಜಕ ದೇವರಾಜ ಪತ್ತಾರ, ಓಜನಳ್ಳಿ ಗ್ರಾಪಂ ಅಧ್ಯಕ್ಷ ಹುಚ್ಚಪ್ಪ ಭೋವಿ, ಸದಸ್ಯರಾದ ದ್ಯಾಮನಗೌಡ ಮಾಲಿಪಾಟೀಲ್, ಹುಚ್ಚಪ್ಪ ಮೇಟಿ, ಅನ್ನಪೂರ್ಣ ಜಂತ್ಲಿ, ಶಶಿಕಲಾ ಈಶ್ವರ್ ಗೌಡ್ರು, ಸಂಜೀವಿನ ಮಹಿಳಾ ಒಕ್ಕೂಟ ಅಧ್ಯೆ ಪುಷ್ಪಾ ಪೊಲೀಸ್ ಪಾಟೀಲ್, ಗ್ರಾಪಂ ಕಾರ್ಯದರ್ಶಿ ಆದಯ್ಯ ಹೇರೂರು, ಕಾಯಕ ಮಿತ್ರ ಮೆಹಬೂಬಿ ಇತರರಿದ್ದರು.