

ಕೊಪ್ಪಳ: ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗುರುವಾರ ನಾಗರಹಾವು ಕಾಣಿಸಿಕೊಂಡು ಕೆಲ ಕಾಲ ಎಲ್ಲರಲ್ಲೂ ಆತಂಕ ಮೂಡಿಸಿತು.
ನಾಗರ ಪಂಚಮಿ ಅಮಾವಾಸ್ಯೆ ದಿನದಂದೇ ಹಾವು ಪ್ರತ್ಯಕ್ಷವಾಗಿದ್ದಕ್ಕೆ ಜನರು ಶುಭ-ಅಶುಭ ಲಗಳ ಬಗ್ಗೆ ಮಾತನಾಡಿಕೊಂಡರು. ನೌಕರರು, ವಿವಿಧ ಕೆಲಸಗಳಿಗೆ ಆಗಮಿಸಿದ್ದ ಸಾರ್ವಜನಿಕರು ಗಾಬರಿಗೊಂಡರು. ಹೆಡೆ ಎತ್ತಿ ಬುಸುಗುಡುತ್ತಿದ್ದ ಹಾವು ಎತ್ತ ಹೋಗುವುದೆಂದು ಹೆದರಿ ಜನ ಸುತ್ತುವರಿದಿದ್ದರು.
ಹಾವು ಬಂದ ವಿಷಯ ಎಲ್ಲೆಡೆ ಹರಡುತ್ತಲೇ ಕಟ್ಟಡದ ವಿವಿಧೆಡೆ ಇದ್ದ ಜನರು ಓಡೋಡಿ ಬಂದು ಕುತೂಹಲದಿಂದ ವೀಕ್ಷಿಸಿದರು. ಬಳಿಕ ಉರಗ ರಕ್ಷಕ ತಂಡದವರು ಆಗಮಿಸಿ ಹಾವು ರಕ್ಷಿಸಿ ಕೊಂಡೊಯ್ದರು.