ವಿಶ್ವ ಪ್ರವಾಸೋದ್ಯಮ ದಿನ ಅಂಗವಾಗಿ ಸೈಕಲ್ ಜಾಥಾದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ

Koppal DC Cycle Jata
ಕೊಪ್ಪಳದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಂಗಳವಾರ ಡಿಸಿ ಎಂ.ಸುಂದರೇಶ ಬಾಬು ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಗಮನ ಸೆಳೆದರು.
Published on

ಕೊಪ್ಪಳ: ವಿಶ್ವ ಪ್ರವಾಸೋದ್ಯಮ ದಿನ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಮಂಗಳವಾರ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ನಗರದ ಜಿಲ್ಲಾಡಳಿತ ಭನವದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಚಾಲನೆ ನೀಡಿದರು.

ಪ್ರವಾಸೋದ್ಯಮ ಪುನರಾವಲೋಕನ ಸಂದೇಶದಡಿ ಜಿಲ್ಲಾಡಳಿತ ಭವನದಿಂದ ಗದಗ ರಸ್ತೆಯ ಮಳೆಮಲ್ಲೇಶ್ವರ ದೇವಸ್ಥಾನದವರೆಗೆ ಜಾಥಾ ನಡೆಸಲಾಯಿತು. ಎಡಿಸಿ ಸಾವಿತ್ರಿ ಬಿ.ಕಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಕೆ.ವಿ., ಕೊಪ್ಪಳ ತಹಸೀಲ್ದಾರ್ ವಿಠ್ಠಲ ಚೌಗಲಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಸೈಕಲ್ ಚಲಾಯಿಸಿ ಗಮನ ಸೆಳೆದರು. ಪ್ರವಾಸ ಮಾಡಿ ಆರೋಗ್ಯವಾಗಿರಿ, ಪ್ರವಾಸ ಮಾಡಿ ಸಂತೋಷ ಪಡಿ, ಪ್ರವಾಸದಿಂದ ಅನುಭವ ಪಡಿ, ಪಂಪಾ ಸರೋವರ ಸಂದೇಶ ಫಲಕಗಳು ಜಾಥದಲ್ಲಿ ಕಂಡುಬಂದವು. ಪ್ರವಾಸಿ ಮಿತ್ರರು, ವಿವಿಧ ಶಾಲೆಗಳ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net