ಟೀಂ ಇಂಡಿಯಾ ಗೆಲುವಿಗೆ ಹಾರೈಕೆ; ಹಿಂದು ಪರ ಸಂಘಟನೆಗಳು, ಕ್ರೀಡಾಭಿಮಾನಿಗಳಿಂದ ವಿಶೇಷ ಪೂಜೆ

24102021 Koppal T-20 world cup india win
Published on


ಕೊಪ್ಪಳ: ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ನಗರದ ಈಶ್ವರ ದೇವಸ್ಥಾನದಲ್ಲಿ ಕ್ರೀಡಾಭಿಮಾನಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥಿಸಿದರು. ಹಿಂದುಪರ ಸಂಘಟನೆಗಳ ಮುಖಂಡರು, ಮಹಿಳೆಯರು ಮಕ್ಕಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಹೋಮ, ಹವನ ನಡೆಯಿತು. ಮಕ್ಕಳು ಭಾರತದ ಬಾವುಟ ಹಿಡಿದು ಆಗಮಿಸಿದ್ದರು. ಎಲ್ಲರೂ ಗೆದ್ದು ಬಾ ಭಾರತ ಘೋಷಣೆ ಕೂಗಿ ಸಂತಸಪಟ್ಟರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲೂ ವಿವಿಧ ಕ್ರಿಕೆಟ್ ತಂಡಗಳು ಶುಭ ಕೋರಿದವು. ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಬೇಕು ಎಂದು ಶುಭ ಹಾರೈಸಿ ಟೀಂ ಇಂಡಿಯಾಗೆ ಜಯವಾಗಲಿ ಎಂದು ಘೋಷಣೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net