ರಾಜೀನಾಮೆ ನೀಡುವ ತಪ್ಪನ್ನು ಈಶ್ವರಪ್ಪ ಮಾಡಿಲ್ಲ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಮರ್ಥನೆ

govind Karjola
Published on

ಕೊಪ್ಪಳ: ವಿಪಕ್ಷಗಳು ವಿನಾಕಾರಣ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಧರಣಿ ನಡೆಸುತ್ತಿದ್ದಾರೆ. ಸಚಿವ ಸ್ಥಾನದಿಂದ ಕೆಳಗಿಳಿಸುವಂಥ ದೊಡ್ಡ ತಪ್ಪು ಅವರು ಮಾಡಿಲ್ಲವೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನವರಿಗೆ ಟೀಕಿಸಲು ವಿಷಯಗಳಿಲ್ಲ. ಹೀಗಾಗಿ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ. ಈಶ್ವರಪ್ಪ ರಾಷ್ಟ್ರಧ್ವಜದ ಬಗ್ಗೆ ಮಾತನಾಡಿಲ್ಲ. ಭಗವಾಧ್ವಜದ ಬಗ್ಗೆ ಮಾತನಾಡಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅದು ದೇಶದ್ರೋಹವಲ್ಲ. ರಾಜೀನಾಮೆ ನೀಡಬೇಕಿಲ್ಲವೆಂದು ಭಾನುವಾರ ಕೊಪ್ಪಳದಲ್ಲಿ ಸುದ್ದಿಗಾರರಿರ ಪ್ರಶ್ನೆಗೆ ಉತ್ತರಿಸಿದರು.

ನವಲಿ ಜಲಾಶಯಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು, ಕಾಮಗಾರಿ ಆರಂಭಿಸುತ್ತೇವೆ. ಕೂಡಲಸಂಗಮನ ಮೇಲೆ ಆಣೆ ಮಾಡಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ನವರಿಗೆ ಯಾವುದೇ ನೈತಿಕತೆ ಇಲ್ಲವೆಂದರು.

ಹಿಜಾಬ್ ವಿಚಾರ ನ್ಯಾಯಾಲಯದಲ್ಲಿದೆ. ತೀರ್ಪು ಬರುವವರೆಗೂ ಶಾಂತಿಯಿಂದ ಮಧ್ಯಂತರ ಆದೇಶ ಪಾಲಿಸಬೇಕು. ನ್ಯಾಯಧೀಶ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹಾಗೂ ಪರಿಶಿಷ್ಟ ಪಂಗಡಕ್ಕೆ 7.5ವರೆಗೆ ಮೀಸಲಾತಿ ಹೆಚ್ಚಳ ಭರವಸೆ ಅನುಷ್ಠಾನ ಯಾವಾಗ ಎಂಬ ಪ್ರಶ್ನೆಗೆ ಮುಗುಳ್ನಕ್ಕ ಕಾರಜೋಳ ಸುಮ್ಮನೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net