ಪ್ರಯಾಣಿಕರಿಗೆ ಸಾರಿಗೆ ಮುಷ್ಕರದ ಬಿಸಿ, ಕೆಲವು ನೌಕರರ ಮನವೊಲಿಸಿದ ಅಧಿಕಾರಿಗಳು

07042021 Koppal Buss protest
Published on

ಕೊಪ್ಪಳ: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬುಧವಾರ ಮುಷ್ಕರ ಆರಂಭಿಸಿದ್ದರಿಂದ ಜಿಲ್ಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಅಧಿಕಾರಿಗಳು ಖಾಸಗಿ ವಾಹನಗಳ ನೆರವು ಪಡೆದು ತಕ್ಕಮಟ್ಟಿಗೆ ಜನರಿಗೆ ಅನುಕೂಲ ಮಾಡಿದರು.

ನಗರದಲ್ಲಿ ಬೆಳಗ್ಗೆಯಿಂದಲೇ ಬಸ್‌ಗಳು ಡಿಪೋದಿಂದ ಹೊರಗೆ ಬರಲಿಲ್ಲ. ನೌಕರರು ಬಸ್ ನಿಲ್ದಾಣ ಹಾಗೂ ಡಿಪೋ ಬಳಿಯೂ ಸುಳಿಯಲಿಲ್ಲ. ಅಧಿಕಾರಿಗಳು ನೌಕರರಿಗೆ ಕರೆ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸಿದರು. ನೌಕರರು ಬಾರದ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಸಹಾಯ ಪಡೆದು ಪ್ರಯಾಣಿಕರನ್ನು ಊರುಗಳಿಗೆ ಕಳುಸಿದರು. ಬೆಳಗ್ಗೆ ದೂರದ ಊರಿನಿಂದ ಬಂದ ಬಸ್‌ಗಳ ಪೈಕಿ ಒಂದು ಬಸ್ ಮಾತ್ರ ಕೊಪ್ಪಳದಿಂದ ಹೊರಟಿತು.

ಪ್ರಯಾಣಿಕರು ಹೆಚ್ಚಿರುವ ಮಾರ್ಗದಲ್ಲಿ ಖಾಸಗಿ ವಾಹನಗಳು ತೆರಳಿದವು. ಜನರು ಭರ್ತಿಯಾಗುವವರೆಗೂ ವಾಹನಗಳು ಹೊರಡಲಿಲ್ಲ. ಖಾಸಗಿ ವಾಹನಗಳ ಹೆಚ್ಚುವರಿ ಹಣ ಸುಲಿಗೆಗೆ ಅಧಿಕಾರಿಗಳು ಬ್ರೇಕ್ ಹಾಕಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬಸ್ ನಿಲ್ದಾಣದಲ್ಲಿದ್ದು ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net