ಮಹನೀಯರ ಆದರ್ಶ ಪಾಲಿಸೋಣ, ಸಚಿವ ಶಿವರಾಜ ತಂಗಡಗಿ ಅನಿಸಿಕೆ

koppal valmiki jayanthi minister shivaraj tangadagi
Published on

ಕೊಪ್ಪಳ: ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡುವುದೇ ಮಹನೀಯರ ಜಯಂತಿ ಆಚರಣೆ ಮುಖ್ಯ ಉದ್ದೇಶ ಎಂದು ಕನ್ನಡ ಮತ್ತು ಸಂಸ್ಕತಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಯಂತಿಯಂದು ಮೆರವಣಿಗೆ ಮಾಡಿ ಕುಣಿದು ಕುಪ್ಪಳಿಸುವ ಬದಲು ಮಹನೀಯರ ಇತಿಹಾಸ ಅರಿಯೋಣ. ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಸಮಾಜಕ್ಕೆ ವಾಲ್ಮೀಕಿ ಸಮುದಾಯ ತನ್ನದೇ ಕೊಡುಗೆ ನೀಡಿದೆ. ಕುಮಾರರಾಮ, ಸುರಪೂರ ದೊರೆ ಸೇರಿ ಹಲವು ನಾಯಕರು ಆಳ್ವಿಕೆ ಮಾಡಿರುವ ಐತಿಹ್ಯವಿದೆ. ಸರ್ಕಾರಕ್ಕೆ ಮನಮುಟ್ಟುವ ಪ್ರಸ್ತಾಪಗಳು ಜಯಂತಿ ಮೂಲಕ ಆಗಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಅನುಕೂಲ ಕಲ್ಪಿಸಿದರು. ಎಸ್ಟಿ ಅಭಿವೃದ್ಧಿ ನಿಗಮಕ್ಕೆ ಎರಡು ತಿಂಗಳೊಳಗಾಗಿ ಪೂರ್ಣ ಪ್ರಮಾಣದ ಅನುದಾನ ಒದಗಿಸುವರು. ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಗತ್ತಿಗೆ ರಾಮಾಯಣ ಮಹಾಕಾವ್ಯವನ್ನು ಮಹರ್ಷಿ ವಾಲ್ಮೀಕಿ ನೀಡಿದರು. ಅವರು ಎಲ್ಲ ಜಾತಿ-ಧರ್ಮಕ್ಕೆ ದಾರಿದೀಪ. ಸಮಾಜದ ಕಟ್ಟ ಕಡೆಯ ಸಮುದಾಯದ ಉದ್ಧಾರಕ್ಕೆ ಶ್ರಮಿಸೋಣ. ನಗರದಲ್ಲಿ ನಿಮಾರ್ಣವಾಗುತ್ತಿರುವ ವಾಲ್ಮೀಕಿ ಭವನ ಪೂರ್ಣಗೊಳಿಸುವುದರ ಜತೆಗೆ ವಾಲ್ಮೀಕಿ ಮಹರ್ಷಿಯವರ ಮೂರ್ತಿ ನಿಮಾರ್ಣ ಮಾಡಲಾಗುವುದು ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ವಾಲ್ಮೀಕಿ ಮಹರ್ಷಿ ರಾಮಾಯಣದಲ್ಲಿ ಏಕಪತ್ನಿ ವ್ರತಸ್ಥ, ಪಿತೃವಾಕ್ಯ ಪಾಲಕ ಶ್ರೀರಾಮನನ್ನು ಸೃಷ್ಟಿಸಿದ್ದಾರೆ. ವಾಲ್ಮೀಕಿ ಋಷಿವರ್ಯರಲ್ಲೇ ಉನ್ನತ ಸ್ಥಾನದಲ್ಲಿದ್ದವರು. ಅವರು ಬರೆದ ರಾಮಾಯಣ ಮಹಾಕಾವ್ಯ ಕೂಡ ಜಾಗತಿಕವಾಗಿ ಹೆಸರಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗದಂತೆ ಉದ್ಯೋಗ, ಶಿಕ್ಷಣ, ಸೌಲಭ್ಯಗಳನ್ನು ಸರ್ಕಾರ ಸಕಾಲಕ್ಕೆ ಒದಗಿಸಬೇಕೆಂದು ಆಗ್ರಹಿಸಿದರು.

ಉಪನ್ಯಾಸಕ ಡಾ.ಪ್ರಭುರಾಜ ನಾಯಕ ವಿಶೇಫಿ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕು ಮುನ್ನ ನಗರದ ಗಡಿಯಾರ ಕಂಬ ವೃತ್ತದಿಂದಸಾಹಿತ್ಯ ಭವನವರೆಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದವರಿಗೆ, ಸಿಎಂ ಕಪ್​ ನೆಟ್​ ಬಾಲ್​ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದ ಸಾಹಿತ್ಯ ಗೊಂಡಬಾಳ ಹಾಗೂ ಸಮುದಾಯದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಡಾ.ರಾಮ್​ ಎಲ್​. ಅರಸಿದ್ದಿ, ಡಿಎ??? ಕಾವ್ಯಾ ಚತುರ್ವೇದಿ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್​ ಪಾಫಿಾ ಪಲ್ಟನ್​, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ಸಮುದಾಯ ಜಿಲ್ಲಾಧ್ಯಕ್ಷ ಕೆ.ಎನ್​ ಪಾಟೀಲ್​ ಹಾಗೂ ಇತರ ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net