

ಕೊಪ್ಪಳ: ವಾಲ್ಮೀಕಿ ಮಹರ್ಷಿ ಮನು ಕುಲದ ಆದರ್ಶ ಕಲವಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸತದಲ್ಲಿ ರಾಮಾಯಣ ರಚಿಸುವ ಮೂಲಕ ಭಾರತದ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಮಹಾಕಾವ್ಯ ಮೂಲಕ ಅನೇಕ ಆದರ್ಶಗಳನ್ನು ಜಗತ್ತಿಗೆ ನೀಡಿದ್ದಾರೆ. ಅವುಗಳನ್ನು ಜಗತ್ತಿಗೆ ಸಾರಬೇಕಿದೆ. ಯುವ ಪೀಳಿಗೆಗೆ ಈ ಬಗ್ಗೆ ತಿಳಿಸಬೇಕಿದೆ. ಈ ಮೂಲಕ ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಿಸೋಣ. ಒಂದೇ ಕಾವ್ಯದಲ್ಲಿ ನೂರಾರು ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಮಾನವೀಯತೆ, ಕರುಣೆ, ಕ್ರೌರ್ಯ, ಭ್ರಾತೃತ್ವ ಹೀಗೆ ಅನೇಕ ಗುಣಗಳನ್ನು ಪ್ರತಿಪಾದಿಸಿದ್ದಾರೆ. ರಾಮಾಯಣ ಭಾರತದ ಚಿತ್ರಕಲೆ, ವಾಸ್ತು ಶಿಲ್ಪ, ಸಂಸತಿ, ಇತಿಹಾಸ, ಪರಂಪರೆ, ನೃತ್ಯ, ನಾಟಕ, ರಂಗಭೂಮಿ, ಸಂಗೀತ, ಯಕ್ಷಗಾನ ಸೇರಿ ಇತರ ಕ್ಷೇತ್ರಗಳ ಮೇಲೆ ಅಗಾಧ ಪ್ರಭಾವ ಬೀರಿದೆ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಹೆಸರೂರು, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ ತಾಳಕೇರಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ನಗರ ಘಟಕ ಅಧ್ಯಕ್ಷ ರಮೇಶ ಕವಲೂರು, ಕನಕ ಮೂರ್ತಿ ಚಲವಾದಿ, ಕೀರ್ತಿ ಪಾಟೀಲ್, ದೇವರಾಜ ಹಾಲಸಮುದ್ರ, ಸಂಗಮೇಶ ಹಿರೇಮಠ ಇತರರಿದ್ದರು.