ಏಕತಾ, ಸಂಕಲ್ಪ ದಿವಸ್ ಪ್ರತಿಜ್ಞೆ ಸ್ವೀಕಾರ

31102021 Koppal Ekta-Sankalpa Divas
Published on


ವಲ್ಲಭಭಾಯಿ ಪಟೇಲ್ ಜನ್ಮದಿನ, ಇಂದಿರಾ ಗಾಂಧಿ ಪುಣ್ಯತಿಥಿ ಆಚರಣೆ

ಕೊಪ್ಪಳ: ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಅಂಗವಾಗಿ ನಗರದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ಮಾಜಿ ಉಪ ಪ್ರಧಾನಿ ಸರ್ದಾರ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹುತಾತ್ಮರಾದ ದಿನವನ್ನು ಸಂಕಲ್ಪ ದಿನವಾಗಿ ಆಚರಿಸಲಾಗುತ್ತಿದೆ ಎಂದರು. ಏಕತಾ ದಿವಸ್ ಅಂಗವಾಗಿ ‘‘ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ನಮ್ಮನ್ನು ಅರ್ಪಿಸಿಕೊಳ್ಳುತ್ತೇವೆ. ಪಟೇಲ್‌ರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿ ಕಾಪಾಡುವುದಾಗಿ ಪ್ರಮಾಣ ಮಾಡುತ್ತೇವೆ’’ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ರಾಷ್ಟ್ರೀಯ ಸಂಕಲ್ಪ ದಿವಸ್ ಅಂಗವಾಗಿ ‘‘ರಾಷ್ಟ್ರದ ಸ್ವಾತಂತ್ರ್ಯ ಕಾಪಾಡಲು, ದೇಶ ರಕ್ಷಣೆ ಮಾಡಲು, ದೇಶದ ಸುಭದ್ರತೆ ಕಾರ್ಯದಲ್ಲಿ ತನು-ಮನ-ಧನದಿಂದ ಕಾರ್ಯವೆಸಗಲು ನಿಷ್ಠೆಯಿಂದ ಪ್ರತಿಜ್ಞೆ ಮಾಡುತ್ತೇವೆ. ಎಂದಿಗೂ ಹಿಂಸೆಯ ಪ್ರಯೋಗ ಮಾಡುವುದಿಲ್ಲ. ಎಲ್ಲ ರೀತಿಯ ಭಯೋತ್ಪಾದನೆ ಮತ್ತು ಹಿಂಸಾಕೃತ್ಯಗಳನ್ನು ವಿರೋಧಿಸುತ್ತೇವೆ. ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ತಿಳುವಳಿಕೆಯಿಂದ, ಸಾಮಾಜಿಕ ಬಾಂಧವ್ಯ ಹಾಗೂ ಒಡನಾಡಿಗಳ ಜತೆಗೂಡಿ ಮಾನವ ಜೀವ ಹಾಗೂ ಮೌಲ್ಯಗಳನ್ನು ನಾಶಪಡಿಸುವ ವಿನಾಶಕಾರಿ ಶಕ್ತಿಗಳ ವಿರುದ್ಧ ಹೋರಾಡುವುದಾಗಿ’’ ಪ್ರತಿಜ್ಞೆ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net