ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಗುಪ್ತಾ ಅಧ್ಯಕ್ಷ

IMG-20241018-WA0031
Published on

ಕೊಪ್ಪಳ: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಾಂಗ್ರೆಸ್ ಮುಖಂಡ, ಉದ್ಯಮಿ ಶ್ರೀನಿವಾಸ ಗುಪ್ತಾ ಅವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಸರ್ಕಾರ ಬದಲಾವಣೆ ಆದ ಬಳಿಕ ಇಷ್ಟು ದಿನಗಳವರೆಗೆ ಕುಡಾ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳು ಖಾಲಿಯಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಕೈ ಮುಖಂಡರು ಭಾರಿ ಪೈಪೋಟಿ ನಡೆಸಿದ್ದರು. ಹೀಗಾಗಿ ಲೋಕಸಭಾ ಚುನಾವಣೆ ಮುಗಿವವರೆಗೆ ನೇಮಕಾತಿ ಮುಂದೂಡಲಾಗಿತ್ತೆನ್ನಲಾಗಿದೆ.

ಎಲ್ಲ ಸಮುದಾಯಗಳನ್ನು ಸಮಾಧಾನಿಸುವ ನಿಟ್ಟಿನಲ್ಲಿ ಶಾಸಕ ರಾವೇಂದ್ರ ಹಿಟ್ನಾಳ ನಗರಸಭೆ ಹಾಗೂ ವಿವಿಧ ಹುದ್ದೆಗಳಿಗೆ ಕೆಲವರನ್ನು ನೇಮಿಸಿದ್ದಾರೆ. ಸದ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಗುಪ್ತಾ ಅಧ್ಯಕ್ಷರಾದರೆ, ಮಾರ್ಕಂಡೇಶ್ವರ ಕಲ್ಲನವರ, ಚನ್ನಬಸವಯ್ಯ ಚನ್ನವಡಿಯವರ ಮಠ, ಅಬ್ದುಲ್ ಲತ್ಿ ಹಾಗೂ ಕಾಳಮ್ಮ ಸದಸ್ಯರಾಗಿ ನೇಮಕವಾಗಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net