ಜಂಟಿ ಖಾತೆ ಬದಲಾವಣೆ ಮಾಡಿ

KOPPAL TEACHERS MEMORANDUM CHANGE ACCOUNT MAINTENANCE MID DAY MEALS SCHEEM
ಬಸಿಯೂಟ ಯೋಜನೆ ಖಾತೆ ನಿರ್ವಹಣೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಶಿಕ್ಷಕರು ಸೋಮವಾರ ತಾಪಂ ಇಒ ದುಂಡಪ್ಪ ತುರಾದಿಗೆ ಮನವಿ ಸಲ್ಲಿಸಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಜಿಲ್ಲಾ ಪ್ರ.ಕಾ.ಮಂಜುನಾಥ ಬಿ., ಗೌರವ ಅಧ್ಯಕ್ಷ ಈರಪ್ಪ ಬಳ್ಳೊಳ್ಳಿ, ಯಶೋದಾ ಹುನಗುಂದ, ಗೀತಾ ಚಕ್ಕಡಿ ಇದ್ದರು.
Published on

ಕೊಪ್ಪಳ: ಮಧ್ಯಾಹ್ನದ ಬಿಸಿಯೂಟ ಯೋಜನೆ ಜಂಟಿ ಖಾತೆ ಬದಲಾವಣೆಗೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಜಿಪಂ ಹಾಗೂ ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 20 ವರ್ಷದಿಂದ ಶಾಲಾ ಮುಖ್ಯ ಶಿಕ್ಷಕ ಹಾಗೂ ಮುಖ್ಯ ಅಡುಗೆದಾರರ ಹೆಸರಲ್ಲಿ ಜಂಟಿ ಖಾತೆ ನಿರ್ವಹಣೆಯಾಗುತ್ತಿದೆ. ಈವರೆಗೆ ಯಾವುದೇ ಸಮಸ್ಯೆಗಳಾಗಿಲ್ಲ. ಸರ್ಕಾರ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕರ ಹೆಸರಲ್ಲಿ ಜಂಟಿ ಖಾತೆ ನಿರ್ವಹಣೆಗೆ ಆದೇಶಿಸಿದೆ.

ಇದರಿಂದ ಸಾಕಷ್ಟು ಸಮಸ್ಯೆಗಳು ಉಲ್ಬಣಿಸಿವೆ. ಇದು ನಿತ್ಯ ಕಾಯಕವಾಗಿದ್ದು, ಎಸ್ಡಿಎಂಸಿ ಅಧ್ಯಕ್ಷರು ಎಲ್ಲ ಸಮಯದಲ್ಲೂ ಲಭ್ಯವಿರುವುದಿಲ್ಲ. ಮುಖ್ಯ ಶಿಕ್ಷಕರಿಗೆ ವಿನಾ ಕಾರಣ ಕಿರಿಕಿರಿ ಆಗುತ್ತಿದೆ. ಅಧ್ಯಕ್ಷರು ಲಾಭದ ಮೂಲ ಹುಡುತ್ತಿದ್ದಾರೆಂದು ಆರೋಪಿಸಿದರು.

ಕೂಡಲೇ ಮೊದಲಿನಂತೆ ಮರು ಆದೇಶ ಮಾಡಬೇಕು. ಮುಖ್ಯ ಶಿಕ್ಷಕ ಹಾಗೂ ಮುಖ್ಯ ಅಡುಗೆದಾರರ ಹೆಸರಿನಲ್ಲಿ ಖಾತೆ ನಿರ್ವಹಣೆ ಆಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಶಿಕ್ಷಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಒತ್ತಾಯಿಸಿದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಹಾಗೂ ತಾಪಂ ಇಒ ದುಂಡಪ್ಪ ತುರಾದಿಗೆ ಮನವಿ ಸಲ್ಲಿಸಲಾಯಿತು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಜಿಲ್ಲಾ ಪ್ರ.ಕಾ.ಮಂಜುನಾಥ ಬಿ., ಗೌರವ ಅಧ್ಯಕ್ಷ ಈರಪ್ಪ ಬಳ್ಳೊಳ್ಳಿ, ತಾಲೂಕು ಅಧ್ಯಕ್ಷ ಕೊಟ್ರಪ್ಪ ಗಡಗಿ, ಪ್ರ.ಕಾ.ಮಹೇಶ ಟಂಕಸಾಲಿ, ವೀರೇಶ ಅರಳಿಕಟ್ಟಿ, ಸುಭಾಸರಡ್ಡಿ, ಯಶೋದಾ ಹುನಗುಂದ, ಗೀತಾ ಚಕ್ಕಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net