ತಜ್ಞರ ವರದಿ ಆಧರಿಸಿ ಟಿಬಿ ಡ್ಯಾಂ ನಿರ್ವಹಣೆ

IMG-20240922-WA0070
Published on
  • ಸಿಎಂ ಸಿದ್ದರಾಮಯ್ಯ ಭರವಸೆ

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಇತ್ತೀಚಿಗೆ ಕೇಂದ್ರದ ತಜ್ಞರ ತಂಡ ಭೇಟಿ ನೀಡಿದ್ದು, ತಂಡ ನೀಡುವ ವರದಿಯ ಆಧಾರದ ಮೇಲೆ ಕ್ರಸ್ಟ್​ ಗೇಟ್​ ಬದಲಾವೇ ಸೇರಿ ಇತರ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಖಾಸಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದರು.

ಕ್ರಸ್ಟ್​ ಗೇಟ್​ ಮುರಿದಹೋದ ಬಳಿಕ ಪೋಲಾಗಿದ್ದ ನೀರು ಮರಳಿ ಸಂಗ್ರಹವಾಗಿದ್ದು ಖುಷಿಯಾಗಿದೆ. ಈಗ 101.773 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಎರಡನೆ ಬೆಳೆಗೂ ನೀರು ಲಭಿಸುವ ವಿಶ್ವಾಸವಿದೆ. 50 ವರ್ಫಿಗಳಾದಾಗಲೇ ಕ್ರಸ್ಟ್​ ಗೇಟ್​ ಬದಲಿಸಬೇಕಾಗಿತ್ತು. ಈಗ 70 ವರ್ಫಿಗಳಾಗಿವೆ. ಇಫಿ್ಟು ವರ್ಫಿ ನಿರ್ವಹಣೆ ಮಾಡಲಾಗಿದೆ. ಮುಂದೇನು ಮಾಡಬೇಕು ಎನ್ನುವುದನ್ನು ವರದಿ ಬಳಿಕ ತೀಮಾರ್ನಿಸಲಾಗುವುದು ಎಂದರು.

ಗೇಟ್​ ಕೊಚ್ಚಿ ಹೋದಾಗ ಎಲ್ಲ ಸಚಿವ, ಶಾಸಕರು, ಅಧಿಕಾರಿಗಳು ನಿಗಾವಹಿಸಿ ಕೆಲಸ ಮಾಡಿದರು. ಕನ್ನಯ್ಯ ನಾಯ್ಡು ಶ್ರಮ ವಹಿಸಿದರು. ಇದರಿಂದ ರೈತರಿಗೆ ಯಾವುದೇ ತೊಂದರೆಯಾಗಲಿಲ್ಲ. ಈಗ ನೀರು ಮರಳಿ ಸಂಗ್ರಹವಾಗಿದ್ದರಿಂದ ರೈತರ ಆತಂಕ ದೂರವಾಗಿದೆ ಎಂದರು.

ಹಿಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ರಸ್ತೆ ದುರಸ್ತಿ ಕೆಲಸ ಮಾಡಲಿಲ್ಲ. ಈ ಸಲ ಮಳೆಯೂ ಆಗಿರುವ ಕಾರಣ ರಸ್ತೆಗಳು ಹಾಳಾಗಿದ್ದು, ಅದಫಿ್ಟು ಬೇಗನೆ ದುರಸ್ತಿ ಮಾಡಲಾಗುವುದು ಎಂದರು.

ಶಾಸಕ ಮುನಿರತ್ನ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ನಾವು ಯಾರ ವಿರುದ್ಧವೂ ದ್ವೇಫಿದ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಅವರು ತಪ್ಪು ಮಾಡಿದ್ದಕ್ಕೆ ಪ್ರಕರಣ ದಾಖಲಾಗಿದೆ. ಹೆಚ್ಚು ಪ್ರಕರಣಗಳು ದಾಖಲಾಗಿದ್ದರಿಂದ ಎ???ಟಿ ರಚಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​, ಸಚಿವರಾದ ಶಿವರಾಜ ತಂಗಡಗಿ, ಜಮೀರ್​ ಅಹ್ಮದ್​ ಖಾನ್​, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net