ಅನ್ನದಾತರ ಆತಂಕ ದೂರ

IMG-20240922-WA0065
Published on
  • ಎರಡನೇ ಬೆಳೆಗೂ ನೀರು ಲಭ್ಯತೆ
  • ಸಿಎಂ ಸಿದ್ದರಾಮಯ್ಯ ವಿಶ್ವಾಸ
  • ವಿಪಕ್ಷಗಳ ಟೀಕೆಗೆ ತಿರುಗೇಟು

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್​ ತುಂಡಾಗಿ ಎದುರಾಗಿದ್ದ ಆತಂಕ ನಿವಾರಿಸಿದ ತಜ್ಞರು, ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ರೈತರ ಪರವಾಗಿ ಧನ್ಯವಾದಗಳು. ನುಡಿದಂತೆ ನಡೆವ ಮೂಲಕ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಮುನಿರಾಬಾದ್​ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಸ್ಟಾಪ್​ ಲಾಗ್​ ಗೇಟ್​ ಅಳವಡಿಕೆ ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ರಸ್ಟ್​ ಗೇಟ್​ ತುಂಡಾದಾಗಿನಿಂದ ಮರು ನಿಮಾರ್ಣ ಮಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ. ಘಟನೆ ನಡೆದ ತಕ್ಷಣ ಡಿಸಿಎಂ, ಸಚಿವರು ಸ್ಥಳಕ್ಕೆ ಆಗಮಿಸಿ ಶ್ರಮಿಸಿದ್ದಾರೆ. ನಾನೂ ಆ.13ರಂದು ಬಂದು ವೀಕ್ಷಿಸಿದೆ. ರೈತರು ಅಳಲು ತೋಡಿಕೊಂಡರು. ತಜ್ಞ ಕನ್ಹಯ್ಯ ನಾಯ್ಡು ಅವರಲ್ಲಿ ನೀರು ಉಳಿಸುವಂತೆ ಮನವಿ ಮಾಡಿದ್ದೆ. ಅದರಂತೆ ಅವರೆಲ್ಲ ಶ್ರಮವಹಿಸಿ 20 ಟಿಎಂಸಿ ನೀರು ಉಳಿಸಿದ್ದಾರೆ. ಅವರಿಗೆಲ್ಲ ಅಭಿನಂದನೆ. ಸದ್ಯ ಜಲಾಶಯದಲ್ಲಿ 101.773 ಟಿಎಂಸಿ ನೀರಿದೆ. ರೈತರಿಗೆ ತೊಂದರೆ ಆಗಲು ಬಿಡುವುದಿಲ್ಲ. ದೇವರ ದಯೆಯಿಂದ ಜಲಾಶಯ ತುಂಬಿದೆ. ಮೊದಲ ಬೆಳೆಗೆ ಸಮಸ್ಯೆ ಇಲ್ಲ. ಎರಡನೇ ಬೆಳೆಗೂ ನೀರು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಿವಿ ಅಲ್ವಾ, ನೀವೆಲ್ಲ ಖುಷಿಯಾಗಿದಿರಿ ಅಲ್ವಾ, ಉತ್ತಮ ಮಳೆ, ಬೆಳೆ ಆಗುತ್ತಿದೆ ಅಲ್ವಾ ? ಎಂದು ಜನರನ್ನು ಪ್ರಶ್ನಿಸಿದರು. ನೀವೆಲ್ಲ ಲೋಕಸಭೆಯಲ್ಲಿ ಐದು ಸ್ಥಾನ ಗೆಲ್ಲಿಸಿಕೊಟ್ಟಿದ್ದೀರಿ ನಿಮಗೆಲ್ಲ ನಾನು ಋಣಿ. ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ನನ್ನ ಕೈ ಹಿಡಿದಿದ್ದೀರಿ. ಈ ಭಾಗದ ಜನ ಪ್ರಾಮಾಣಿಕರು. ಆದರೆ, ವಿಪಕ್ಷಗಳು ಸರಿಯಾಗಿಲ್ಲ. ಸುಳ್ಳು ಮಾಹಿತಿ ಕೊಟ್ಟು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ. ದಯವಿಟ್ಟು ಅವರ ಮಾತಿಗೆ ಕಿವಿಗೊಡಬೇಡಿ. ಕಳೆದ ಸರ್ಕಾರ ಐದು ವರ್ಫಿ ಹೊಸ ರಸ್ತೆ ಮಾಡುವುದರಿಲಿ, ಇರುವ ರಸ್ತೆಗಳನ್ನು ನಿರ್ವಹಣೆ ಮಾಡಲಿಲ್ಲ. ಈಗ ಕೊಪ್ಪಳ ಜಿಲ್ಲೆಯಲ್ಲಿ ಹಾಳಾದ ರಸ್ತೆಗಳನ್ನು ತಕ್ಷಣ ರಿಪೇರಿ ಮಾಡುವಂತೆ ಆದೇಶಿಸಿರುವೆ ಎಂದರು.

ಗ್ಯಾರಂಟಿ ಯೋಜನೆ ಬಡವರಿಗೆ ವರವಾಗಿವೆ. ಕಲಬುರ್ಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ 56 ರ್ನಿಣಯ ಕೈಗೊಂಡಿದ್ದು ಅದರಲ್ಲಿ 46 ಕಕ ಭಾಗಕ್ಕೆ ಸಂಬಂಧಿಸಿವೆ. 11 ಸಾವಿರ ಕೋಟಿ ರೂ. ಅನುದಾನ ಬಳಕೆಗೆ ಅನುಮೋದನೆ ನೀಡಿದ್ದೇವೆ. ಬಿಜೆಪಿಯವರು ಇಂಥ ಕೆಲಸ ಮಾಡಲಿಲ್ಲ. ಈ ಭಾಗಕ್ಕೆ 371(ಜೆ) ಸೌಲಭ್ಯ ಕಲ್ಪಿಸಿದ್ದು ಕಾಂಗ್ರೆಸ್​. ಎಸ್​.ಎಂ.ಕೃಫ್ಣಿ ಕೇಂದ್ರಕ್ಕೆ ಪತ್ರ ಬರೆದು ಜಾರಿಗೆ ಮನವಿ ಮಾಡಿದರೆ, ಉಪ ಪ್ರಧಾನಿ ಆಗಿದ್ದ ಎಲ್​.ಕೆ.ಅಡ್ವಾಣಿ ಜಾರಿ ಮಾಡಲಾಗದು ಎಂದು ಮರುಬಪತ್ರ ಬರೆದರು. ಆದರೆ, ಮನಮೋಹನಸಿಂಗ್​ ಪ್ರಧಾನಿ ಆಗಿದ್ದಾಗ ಜಾರಿ ಮಾಡಿದರು. ರಾಜ್ಯದ ಹಿಂದುಳಿದ ತಾಲೂಕುಗಳ ಅಧ್ಯಯನಕ್ಕೆ ಗೋವಿಂದರಾವ್​ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ವರದಿ ಬಂದ ಮೇಲೆ ಪ್ರಾದೇಶಿಕ ಅಸಮತೋಲನ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. 371(ಜೆ) ಮೀಸಲು ನೀಡಿದ ಮೇಲೆ ಒಮ್ಮೆಯೂ ಕೇಂದ್ರ ಅನುದಾನ ನೀಡಿಲ್ಲ. ಈ ಬಗ್ಗೆ ಬಿಜೆಪಿ ಸಂಸದರೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವುದಿಲ್ಲ. ನಾವು ಕಕ ಭಾಗದ ಅಭಿವೃದ್ಧಿಗೆ 5ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ನಮ್ಮ ಸರ್ಕಾರ ದಲಿತ, ಅಲ್ಪಸಂಖ್ಯಾತ, ಬಡವ, ಮಹಿಳೆಯರ ಪರವಾಗಿ ಇರಲಿದೆ ಎಂದು ಅಭಯ ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ, ನಿಮ್ಮ ಸೇವೆ ಮಾಡಲು ನಮಗೆ ಸಿಕ್ಕ ಅವಕಾಶ ನಮ್ಮ ಭಾಗ್ಯ. ನನಗೆ ಮಧ್ಯರಾತ್ರಿ ಡ್ಯಾಂ ಗೇಟ್​ ಕಟ್​ ಆದ ವಿಫಿಯ ತಿಳಿಯಿತು. ತಕ್ಷಣವೇ ನಮ್ಮಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದೆ. ಎಲ್ಲರೂ ಹಗಲಿರುಳು ಶ್ರಮಿಸಿ ಹೊಸ ಇತಿಹಾಸ ನಿರ್ಮಿಸಿದರು. ವಿಪಕ್ಷಗಳು ಟೀಕಿಸಿದವು. ಆದರೆ, ಅವರ ಟೀಕೆ ಸತ್ತಿವೆ. ನಮ್ಮ ಕೆಲಸ ಉಳಿದಿದೆ. ಇಡೀ ದೇಶ ನಮ್ಮ ಕಾರ್ಯಾಚರಣೆ ವೀಕ್ಷಿಸಿ ಮೆಚ್ಚಿದೆ ಎಂದರು.

ಗಂಗಾ ಸ್ನಾನ, ತುಂಗ ಪಾನ ಎಂಬ ಮಾತಿದೆ. ಇದು ಅಫಿ್ಟು ಪವಿತ್ರ ನೀರು. ಆಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು ಎಂದು ಮಾಜಿ ಪ್ರಧಾನಿ ನೆಹರು ಹೇಳಿದ್ದರು. ನಿಮ್ಮ ಬೇಡಿಕೆಯಂತೆ ತಜ್ಞರ ವರದಿ ಪಡೆದು ಟಿಬಿ ಡ್ಯಾಂನ ಎಲ್ಲ ಗೇಟ್​ ಗಳನ್ನು ಬದಲಾವಣೆ ಮಾಡುತ್ತೇವೆ. ನವಲಿ ಸಮಾನಾಂತರ ಜಲಾಶಯದ ಡಿಪಿಆರ್​ ಸಿದ್ಧಗೊಂಡಿದೆ. ಆಂಧ್ರ, ತೆಲಂಗಾಣ ಸರ್ಕಾರಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. 33ಟಿಎಂಸಿ ಹೂಳಿಗೆ ಪರ್ಯಾಯವಾಗಿ ಸಮಾನಾಂತರ ಜಲಾಶಯ ನಿರ್ಮಿಸಬೇಕಿದೆ. ನಿಮಾರ್ಣಕ್ಕೆ ನಮ್ಮ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ನುಡಿದಂತೆ ನಡೆಯಲಿದೆ. ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಫಿ್ಠಾನ ಮಾಡಿದ್ದೇವೆ. ವಿರೋಧ ಪಕ್ಷಗಳು ಎಫಿ್ಟೇ ಅಪಪ್ರಚಾರ ಮಾಡಿದರೂ ಜನ ನಂಬುವುದಿಲ್ಲ. ಇನ್ನು ಹತ್ತು ವರ್ಫಿ ನಾವೇ ಅಧಿಕಾರದಲ್ಲಿರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ನಮ್ಮದು ಜನಪರ ಸರ್ಕಾರ. ಇದಕ್ಕೆ ಸಾಕ್ಷಿ ತುಂಗಭದ್ರಾ ಕ್ರಸ್ಟ್​ ಗೇಟ್​ ಸಮಸ್ಯೆ ನಿವಾರಿಸಿದ್ದೇ ಸಾಕ್ಷಿ. ವಿರೋಧಿಗಳು 60 ಟಿಎಂಸಿ ಅಡಿ ನೀರು ಖಾಲಿ ಮಾಡುವುದು ಅನಿವಾರ್ಯ ಎಂದರು. ಆದರೆ, ಸಿಎಂ, ಡಿಸಿಎಂ ಇದನ್ನು ಸವಾಲಾಗಿ ಸ್ವೀಕರಿಸಿದರು. ನಾವೆಲ್ಲ ಸ್ಥಳದಲ್ಲೇ ಬೀಡುಬಿಟ್ಟು ಹಗಲಿರುಳು ಶ್ರಮಿಸಿದ್ದೇವೆ. ಮುಖ್ಯವಾಗಿ ತಜ್ಞ ಕನ್ಹಯ್ಯ ನಾಯ್ಡು ಹಾಗೂ ನಾರಾಯಣ, ಹಿಂದುಸ್ಥಾನ್​ ಇಂಜಿನಿಯರಿಂಗ್ಸ್​ ಹಾಗೂ ಜಿಂದಾಲ್​ ಸಂಸ್ಥೆಗಳು, ಅಧಿಕಾರಿಗಳು, ಕಾರ್ಮಿಕರ ಅವಿರತ ಶ್ರಮದಿಂದ ಸಮಸ್ಯೆ ನಿವಾರಣೆ ಆಗಿದೆ. ಜಲಾಶಯ ಮತ್ತೆ ಭರ್ತಿಯಾಗಿದೆ. ಸಿಎಂ, ಡಿಸಿಎಂ ಬಾಗಿನ ಅರ್ಪಿಸಿದ್ದಾರೆ. 33ಕ್ರಸ್ಟ್​ ಗೇಟ್​ ಬದಲಾಯಿಸಿ ಹೊಸ ಗೇಟ್​ ಅಳವಡಿಸಿದಲ್ಲಿ ನಾಲ್ಕು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ರೈತರ ಪರವಾಗಿ ನಾನು ಸಿಎಂ, ಡಿಸಿಎಂ ನಮ್ಮ ಮನವಿ ಪರಿಗಣಿಸಬೇಕೆಂದು ಮನವಿ ಮಾಡಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಹಾಗೂ ತಾಪಂ ನಿಂದ ಹೊರತಂದ ಸಂಚಿಕೆಗಳ ಬಿಡುಗಡೆ ಮಾಡಲಾಯಿತು. ನಗರ, ಸ್ಥಳಿಯ ಸಂಸ್ಥೆಗಳಲ್ಲಿ ನೇರ ನೇಮಕಾತಿ ಹೊಂದಿದ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಸಚಿವರಾದ ಜಮೀರ್​ ಅಹಮದ್​ ಖಾನ್​, ಡಾ.ಶರಣಪ್ರಕಾಶ ಪಾಟೀಲ್​, ಎನ್​.ಎಸ್​.ಬೋಸರಾಜ್​, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದರಾದ ರಾಜಶೇಖರ ಹಿಟ್ನಾಳ, ಈ.ತುಕಾರಾಮ್​, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ಜೆ.ಎನ್​.ಗಣೇಶ, ಭೀಮಾ ನಾಯ್ಕ, ಎಂ.ಪಿ.ಲತಾ, ಬಸನಗೌಡ ಬಾದರ್ಲಿ, ಕಾಡಾ ಅಧ್ಯಕ್ಷ ಹಸನಸಾಬ್​ ದೋಟಿಹಾಳ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ, ನೀರಾವರಿ ನಿಗಮ ಎಂಡಿ ರಾಜೇಶ ಅಮಿನಬಾವಿ, ಕೆಬಿಜೆಎನ್​ ಎಲ್​ ಎಂಡಿ ಕೆ.ಪಿ.ಮೋಹನರಾಜ್​, ಟಿಬಿ ಬೋರ್ಡ್​ ಕಾರ್ಯದರ್ಶಿ ಒ.ಆರ್​.ಕೆ.ರೆಡ್ಡಿ ಮುನಿರಾಬಾದ್​ ನೀರಾವರಿ ಕೇಂದ್ರ ವಲಯ ಅಧಿಕಾರಿಗಳು ಇದ್ದರು.

ಗವಿಯಪ್ಪ ಗೈರು
ಬಾಗಿನ ಅರ್ಪಣೆ ಸ್ಥಳಕ್ಕೆ ತಮ್ಮ ಬೆಂಬಲಿಗರು, ರೈತರನ್ನು ಬಿಡದಿದ್ದಕ್ಕೆ ಮುನಿಸಿಕೊಂಡ ವಿಜಯನಗರ ಶಾಸಕ ಎಚ್​.ಆರ್​.ಗವಿಯಪ್ಪ ವಾಪಸ್​ ತೆರಳಿದರು. ಅಲ್ಲದೇ ಮುನಿರಾಬಾದ್​ ನಲ್ಲಿ ನಡೆದ ವೇದಿಕೆ ಕಾರ್ಯಕ್ರಮಕ್ಕೂ ಗೈರಾಗಿ ಮುನಿಸು ಮುಂದುವರಿಸಿದರು. ಈ ಬಗ್ಗೆ ತಮ್ಮ ಭಾಫಿಣದಲ್ಲಿ ಪ್ರಸ್ತಾಪಿಸಿದ ಡಿಸಿಎಂ ಶಿವಕುಮಾರ್​, ಭದ್ರತೆ ಇನ್ನಿತರ ಕಾರಣದಿಂದ ಎಲ್ಲರನ್ನೂ ಬಿಡಲಾಗುವುದಿಲ್ಲ. ಹೀಗಾಗಿ ರೈತರನ್ನು ಬಿಟ್ಟಿಲ್ಲ. ಯಾರೂ ಅನ್ಯತಾ ಭಾವಿಸಬಾರದು ಎಂದರು.

ನೀರಾವರಿ ಕ್ಷೇತ್ರ ಬಗ್ಗೆ ವೇದಿಕೆಯಲ್ಲೇ ಚರ್ಚೆ
ಜಲಾಶಯ ವ್ಯಾಪ್ತಿಯಲ್ಲಿ 9.26 ಲಕ್ಷ ಎಕರೆ ಕರ್ನಾಟಕ, ಆಂಧ್ರ 6.25 ಲಕ್ಷ ಎಕರೆ, ತೆಲಂಗಾಣ 87 ಸಾವಿರ ಎಕರೆ ನೀರಾವರಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅಂಕಿ ಅಂಶಗಳಲ್ಲಿ ಗೊಂದಲವಾದ ಕಾರಣ ಸಚಿವರು, ಶಾಸಕರು ತಮಗೆ ತಿಳಿದ ಅಂಕಿ ಹೇಳಿದರು. ನೀರಾವರಿ ಅಧಿಕಾರಿಗಳು ಸಹ ಸರಿಯಾದ ಮಾಹಿತಿ ನೀಡಲಿಲ್ಲ. ಅಧಿಕಾರಿಗಳು ಸಹ ತಕ್ಷಣ ಧಾವಿಸಲಿಲ್ಲ. ಇದರಿಂದ ವೇದಿಕೆಯಲ್ಲೇ ಸಿಎಂ ಎಲ್ಲರನ್ನು ಗದರಿದರು. ಇಂಜಿನಿಯರ್​ ಗೆ ನಿನ್ಯಾರಯ್ಯ ಇಂಜಿನಿಯರ್​ ಮಾಡಿದ್ದು ಎಂದು ಪ್ರಶ್ನಿಸಿದರು. ಬಳಿಕ ನಾನು ನೀಡಿದ ಮಾಹಿತಿ ಸರಿ ಇದೆ. ಇಂಜಿನಿಯರ್​ ಕೊಟ್ಟಿದ್ದನ್ನು ಹೇಳಿರುವೆ. ಒಂದೊಮ್ಮೆ ತಪ್ಪಾಗಿದ್ದರೆ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವೆ ಎಂದರು. ನಾನು ಹೇಳಿದ್ದು ಸರಿ ಎಂದು ಹೇಳುತ್ತಿದ್ದಂತೆ ಜನರು ಕೇಕೆ ಹಾಕಿ ಸಮ್ಮತಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net