

ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್ವಿಷಯದಲ್ಲಿ ಸರ್ಕಾರ ವೈಲ್ಯವಾಗಿದೆ ಎಂದು ವಿಪಕ್ಷಗಳು ಟೀಕಿಸಿದವು. ನಾವು ಕೆಲಸ ಮಾಡಿ ತೋರಿಸಿದ್ದೇವೆ. ಅವರ ಟೀಕೆ ಸತ್ತಿದೆ. ನಮ್ಮ ಕೆಲಸ ಉಳಿದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಟಿ ಬೀಸಿದರು.
ತಾಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಡೀ ದೇಶ ಟಿಬಿ ಡ್ಯಾಂ ಗೇಟ್ ಅಳವಡಿಕೆ ಕಾಮಗಾರಿ ವೀಸಿದೆ. ಹೇಗೆ ಕೆಲಸ ಮಾಡುತ್ತಾರೆಂದು ಗಮನಿಸಿದ್ದಾರೆ. ನಮ್ಮ ಅಧಿಕಾರಿಗಳು, ಸಚಿವ, ಶಾಸಕರು ಒಂದು ಕ್ಷಣವೂ ನಿದ್ದೆ ಮಾಡಿಲ್ಲ. ಗೇಟ್ ಮಾದರಿ ನಮ್ಮ ಬಳಿ ಇತ್ತು. ನಾರಾಯಣ ಇಂಜಿನಿಯರಿಂಗ್, ಹಿಂದುಸ್ಥಾನ ಇಂಜಿನಿಯರಿಂಗ್ ಹಾಗೂ ಜಿಂದಾಲ್ ಕಂಪನಿಗಳು ಸಹಕಾರ ನೀಡಿವೆ. ನೀರು ಸೋರಿಕೆ ಸಂಪೂರ್ಣ ಬಂದ್ ಆಗಿದೆ. ನಾನು ಬರುವಾಗಲು ವಿಮಾನದ ಮೂಲಕ ಡ್ಯಾಂ ವೀಕ್ಷಣೆ ಮಾಡಿದ್ದೇನೆ ಎಂದರು.
ದೇವರ ದಯೆಯಿಂದ ಮತ್ತೆ ನೀರು ತುಂಬಲಿದೆ. ಸಿಎಂ ಹಾಗೂ ನಾನು ಮತ್ತೆ ಬಂದು ಬಾಗಿನ ಅರ್ಪಿಸುತ್ತೇವೆ. ವಿಪಕ್ಷದವರು ಸುಮ್ಮನೆ ಟೀಕೆ ಮಾಡಿದರು. ಅವರ ಟೀಕೆ ಸತ್ತಿವೆ. ನಮ್ಮ ಕೆಲಸ ಉಳಿದಿದೆ. ಜಲಾಶಯಕ್ಕೆ ಪ್ರತಿ ವರ್ಷ 0.5 ಟಿಎಂಸಿ ಅಡಿ ಹೂಳು ಬರುತ್ತದೆ ಎಂಬ ಅಂದಾಜಿದೆ. ಜಲಾಶಯದ ಸುರಕ್ಷತೆ ಸಂಬಂಧಿಸಿದಂತೆ ಒಂದು ಸಮಿತಿ ಮಾಡಿದ್ದೇವೆ. ಅದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನವಲಿ ಸಮಾನಾಂತರ ಜಲಾಶಯದ ಬಗ್ಗೆಯೂ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದೇವೆ. ಮುಂದಿನ ಕ್ರಮ ವಹಿಸುತುತ್ತೇವೆ ಎಂದರು.
ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಡ್ಯಾಂ ಆಯುಷ್ಯ ಹೆಚ್ಚಳಕ್ಕೆ ಬೇಕಾದ ಕೆಲಸ ಸರ್ಕಾರ ಮಾಡಲಿದೆ. ನಮ್ಮ ಹಿರಿಯರು ಮೇಧಾವಿಗಳು. ಅವರ ಮಾಹಿತಿಯಂತೆ ಪ್ರತಿ ವರ್ಷ ಇಂತಿಷ್ಟು ಹೂಳು ಬರುತ್ತದೆಂದು ಅಂದಾಜಿಸಿದ್ದಾರೆ. ಜಗತ್ತಿನಲ್ಲಿ ಎಲ್ಲ ಜಲಾಶಯಗಳು 100 ವರ್ಷ ಆಯುಷ್ಯ ಹೊಂದಿವೆ. ಬಳಿಕ ಅದನ್ನು ನವೀಕರಣ ಅಥವಾ ಹೊಸದಾಗಿ ನಿರ್ಮಿಸುವ ಕೆಲಸ ನಡೆಯುತ್ತದೆ. ಉಪ ಮುಖ್ಯಮಂತ್ರಿ ಹೇಳಿದಂತೆ ಸಮಿತಿ ವರದಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದೆಂದು ಮರು ಉಚ್ಛರಿಸಿದರು.