

ಕೊಪ್ಪಳ: ಮೆಕ್ಕೆಜೋಳ ಬೆಳೆಯಲ್ಲಿ ವಿವಿಧ ಕೀಟ ಭಾಧೆ ಹಾಗೂ ರೋಗ ನಿಯಂತ್ರಣಕ್ಕೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ರಸ ಹೀರುವ ಕೀಟಗಳು ಅದರಲ್ಲೂ ಕರಿ ಹೇನು ಮತ್ತು ಇತರೆ ಕೀಟಗಳ ಭಾದೆ, ಬೂಜುತುಪ್ಪಟ ರೋಗದ ಬಾಧೆ ಕಂಡುಬಂದಿದೆ. ರೋಗಾರ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಮಿ.ಲೀ. ಬೆರೆಸಿ ಸಿಂಪಡಿಸಬೇಕು. ಬೂಜು ತುಪ್ಪಟ ರೋಗಕ್ಕೆ ಆರಂಭ ಹಂತದಲ್ಲಿ ಬೀಜೋಪಚಾರ ಮಾಡಬೇಕು. ಬಿತ್ತಿದ ಒಂದು ತಿಂಗಳೊಳಗೆ ಮೆಟಲಾಕ್ಸಿಲ ಶಿಲೀಂಧ್ರನಾಶಕ ಒಂದು ಲೀಟರ್ ನೀರಿಗೆ ಎರಡುವರೆ ಗ್ರಾಂ ಬೆರೆಸಿ ಸಿಂಪಡಿಸಬೇಕು. ಮಾಹಿತಿಗಾಗಿ ಕೆವಿಕೆ ಮುಂದಾಳು ಡಾ.ಎಂ.ವಿ.ರವಿ ಮೊ.ಸಂ: 9480247745 ಹಾಗೂ ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಮೊ.ಸಂ: 8217696837 ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.