

ಕೊಪ್ಪಳ: ಸ್ವಚ್ಛತೆಯೇ ಸೇವೆ ಅಭಿಯಾನ ಅಂಗವಾಗಿ ನಗರದ ಪ್ರಧಾನ ಅಂಚೆ ಕಚೇರಿ ಅಧಿಕಾರಿ, ಸಿಬ್ಬಂದಿ ಬುಧವಾರ ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು.
ಪ್ರಧಾನ ಅಂಚೆ ಕಚೇರಿಯಿಂದ ಆರಂಭವಾಗಿ ಅಶೋಕ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ವಿಭಾಗೀಯ ಅಂಚೆ ಕಚೇರಿ ಮೂಲಕ ಪ್ರಧಾನ ಅಂಚೆ ಕಚೇರಿ ತಲುಪಿತು. ಸ್ವಚ್ಛತೆಯೇ ಸೇವೆ, ಸ್ವಚ್ಛತೆಯೇ ಆರೋಗ್ಯ , ಮನೆಗೊಂದು ಮರ ಊರಿಗೊಂದು ವನ, ಕಾಡು ಬೆಳೆಸಿ ನಾಡು ಉಳಿಸಿ , ಸ್ವಚ್ಛ ಭಾರತ ಶ್ರೇಷ್ಠ ಭಾರತ ಘೋಷಣೆಗಳೊಂದಿಗೆ ಜಾಥಾ ನಡೆಸಿದರು.
ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರಾದ ಎನ್.ಜಿ.ಭಂಗೀಗೌಡರ್, ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಪೋಸ್ಟ್ ಮಾಸ್ಟರ್ ನಾಗರಾಜ, ಡಿಪಿಎಂ ಸವೋರ್ತ್ತಮ ಉಪಾಧ್ಯಾಯ, ಡಿ.ಎಂ.ದ್ರಾಕ್ಷಿ , ಜಿ.ಎನ್.ಹಳ್ಳಿ , ಸಕ್ರಪ್ಪ ಹೂಗಾರ, ಸುಭಾಷ, ಅಕೌಂಟೆಂಟ್ ಅಶೋಕ, ಸಿಬ್ಬಂದಿ ಬಸವರಾಜ, ಕಿರಣ್, ಪರವಿನ್ ಬೇಗಂ, ರಿಹಾನಾ ಬೇಗಂ, ರಾಧಿಕಾ ಇತರರಿದ್ದರು.