ವಿದ್ಯಾರ್ಥಿಗಳಿಂದ ಫುಡ್ ಫೆಸ್ಟ್ ಆಯೋಜನೆ

23032021 koppal Fast food programe
Published on

ಕೊಪ್ಪಳ: ನಗರದ ಎಸ್‌ವಿಕೆ ಪದವಿ ಕಾಲೇಜಿನಲ್ಲಿ ಮಂಗಳವಾರ ಫುಡ್ ಫೆಸ್ಟ್ ಕಾಯಕ್ರಮ ಆಯೋಜಿಸಲಾಗಿತ್ತು.

ಭಾಗ್ಯನಗರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ವಿ.ಎಸ್.ಉದಯಸಿಂಗ್, ಕಾಲೇಜಿನ ಹಳೆಯ ವಿದ್ಯಾರ್ಥಿನಿ ರಂಜಿತಾ ಕೋತ್ಬಾಳ್ ಹಾಗೂ ಪ್ರಾಚಾರ್ಯ ರಾಜರಾಜೇಶ್ವರ ರಾವ್ ಫುಡ್ ಫೆಸ್ಟ್‌ಗೆ ಚಾಲನೆ ನೀಡಿದರು.

ಬಿಬಿಎ, ಬಿಸಿಎ ಹಾಗೂ ಬಿಕಾಂ ವಿದ್ಯಾರ್ಥಿಗಳು ಮಳಿಗೆಗಳಲ್ಲಿ ಪಾನಿಪುರಿ, ಫಿಂಗರ್ ಚಿಪ್ಸ್ , ಫ್ರೂಟ್ ಸಲಾಡ್, ಐಸ್ ಕ್ರೀಂ ಸೇರಿ ಇತರ ತಿನಿಸು ಪಾನೀಯಗಳ ಪ್ರದರ್ಶನ ಹಾಗೂ ಮಾರಾಟ ಮಾಡಿದರು. ಪಾಲಕರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಫೆಸ್ಟ್‌ಗೆ ಖಾದ್ಯ ಸವಿದರು. ಉಪನ್ಯಾಸಕರಾದ ರಾಮು ವಡಕಿ, ಈಶಪ್ಪ ಮೇಟಿ, ಎಂ.ಆರ್.ಜಯಸಿಂಹ, ಮಹೇಶ್ ರಾವ್, ಬಸವಂತಪ್ಪ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net