ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯ: ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಶ್ರೀಗಳ ಸಂತಾಪ

03012023 gavisri
Published on

ಕೊಪ್ಪಳ: ವಿಜಯಪುರದ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಶ್ರೀಗಳು ನಿಸರ್ಗದ ಆರಾಧಕ. ನಿಷ್ಕಾಮಯೋಗಿ. ನಾಡಿನ ಇತಿಹಾಸದಲ್ಲಿ ಪ್ರವಚನಗಳ ಮೂಲಕ ಜನಸಾಮಾನ್ಯರ ಬದುಕಿಗೆ ಹೊಸ ಉತ್ಸಾಹ ತುಂಬಿದವರು. ನುಡಿದಂತೆ ನಡೆದ ಸರಳ ಸಜ್ಜನಿಕೆಯ ಸಂತರನ್ನು ಕಳೆದು ಕೊಂಡಿದ್ದು ಆಧ್ಯಾತ್ಮಿಕ ಕ್ಷೇತ್ರ ಹಾಗೂ ನಾಡಿಗೆ ತುಂಬಲಾರದ ನಷ್ಟ ಎಂದು ತಿಳಿಸಿದರು.

ಯಾವುದೇ ಪಂಥಗಳಿಲ್ಲದ, ಗ್ರಂಥಕ್ಕೆ ಅಂಟಿಕೊಳ್ಳದ, ಜನರ ಹೃದಯ ಗ್ರಂಥಿಗಳಲ್ಲಿ ಉಳಿದ ಸಂತ-ವಸಂತ ಸಿದ್ಧೇಶ್ವರ ಅಪ್ಪಾಜಿಯವರು. ಅವರು ಸುಳಿದಡೆಯಲ್ಲಿ ಸುಯಿಧಾನ-ಸಮಾಧಾನಗಳು. ನಿಂತ ನಿಲವು ಸದಾ ಸತ್ಯದ ಒಲವು. ಮಾಯ ಮುಟ್ಟದ ಕಾಯ ಭ್ರಮೆಯಿಲ್ಲದ ಭಾವ. ಲೋಕಾಂತವನ್ನು ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು. ಚಿಂತೆಗಳ ಮಧ್ಯ ನಿಶ್ಚಿಂತನಾಗಿ ಬದುಕುವ ಜೀವನ್ಮುಕ್ತಾವಸ್ಥರು.| ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net