

ಕೊಪ್ಪಳ: ತಾಲೂಕಿನ ಶಹಾಪುರ ದಿನದ 24ಗಂಟೆ ಕುಡಿವ ನೀರು ಸರಬರಾಜು ವ್ಯವಸ್ಥೆ ಹೊಂದಿರುವ ಗ್ರಾಮವಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಘೋಷಿಸಿದರು.
ತಾಲೂಕಿನ ಶಹಾಪುರದಲ್ಲಿ ಬುಧವಾರ ಆಯೋಜಿಸಿದ್ದ 24*7 ಕುಡಿವ ನೀರು ಸರಬರಾಜು ಗ್ರಾಮ ೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ 700 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಮಾಡಲಾಗಿದೆ. ಎಲ್ಲ ಕಾಮಗಾರಿಗಳು ಅಸಮರ್ಪಕವಾಗಿವೆ ಎಂಬ ಕೂಗು ಕೇಳಿ ಬರುತ್ತಿದ್ದವು. ಈ ಸಮಸ್ಯೆಗಳನ್ನು ಹೋಗಲಾಡಿಸಲು ವಿಶೇಷ ಕ್ರಮ ಕೈಗೊಂಡು ಪ್ರತಿ ಗ್ರಾಮದಲ್ಲಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಸಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲಿ 24 ತಾಸು ನೀರು ಸರಬರಾಜು ವಾಡಬೇಕಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಜೆಜೆಎಂ ಕಾಮಗಾರಿಗಳನ್ನು ಗುಣಮಟ್ಟದ ಜತೆಗೆ ತ್ವರಿತವಾಗಿ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಬೇಕು.
ಪ್ರತಿ ವಾರದಲ್ಲಿ ಒಂದು ಗ್ರಾಮವನ್ನು 24*7 ಗ್ರಾಮ ಎಂದು ೋಷಣೆ ವಾಡಲು ಕ್ರಮ ವಹಿಸಬೇಕು. ನೀರು ಮಿತವಾಗಿ ಬಳಸಬೇಕು ಹಾಗೂ ಈ ವ್ಯವಸ್ಥೆ ಸೂಕ್ತವಾಗಿ ನಿರ್ವಹಿಸುವಂತೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ವಾತನಾಡಿ, 24*7 ನೀರು ಸರಬರಾಜು ಗ್ರಾಮ ಎಂದು ೋಷಿಸಲಾದ ಗ್ರಾಮದಲ್ಲಿ ನೀರು ಪೋಲಾಗದಂತೆ ನಿವಾಸಿಗಳು ನೋಡಿಕೊಳ್ಳಬೇಕು. ನೀರು ಅವಶ್ಯ ಸಂಪನ್ಮೂಲವಾಗಿದ್ದು, ಮಿತವಾಗಿ ಬಳಸಿಕೊಳ್ಳಬೇಕು. ಪ್ರತಿ ಮನೆ ಸದಸ್ಯರು ಕಡ್ಡಾಯವಾಗಿ ಶೌಚಗೃಹ ಬಳಸಿಕೊಳ್ಳಬೇಕು. ಗ್ರಾಮದ ಸ್ವಚ್ಛತೆಗೂ ಹೆಚ್ಚಿನ ಗಮನ ನೀಡಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಆರ್‌ಡಿಪಿಆರ್ ಕಾರ್ಯಪಾಲಕ ಅಭಿಯಂತರ ಮಹೇಶ್ ಶಾಸಿ, ತಾಪಂ ಇಒ ದುಂಡಪ್ಪ ತುರಾದಿ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಲಾಸ್‌ರಾವ್ ಬೋಸ್ಲೆ, ಗ್ರಾಪಂ ಅಧ್ಯಕ್ಷೆ ತಿಪ್ಪವ್ವ ಶಿವಪ್ಪ ನಾಯಕ, ಉಪಾಧ್ಯಕ್ಷ ಮುರಳೀಧರ ಬಸಿರಾಳ, ಪಿಡಿಇಒ ಗೀತಾಕುವಾರಿ ಧುತ್ತರಗಿ, ಡಿಪಿಎಂ ಶರಣು, ಬೆಂಗಳೂರು ಫೀಡ್ ಬ್ಯಾಂಕ್ ಫೌಂಡೇಷನ್ ರಾಜ್ಯ ಸಂಯೋಜಕ ಡಾ.ನಂದಕುವಾರ, ಸಿಬ್ಬಂದಿ ಓಂಕಾರ, ರವಿಚಂದ್ರ, ಶಶಿಕುವಾರ ಇತರರಿದ್ದರು.