ಹಿರಿಯ ನಾಗರಿಕರಿಗೆ ಕ್ರೀಡೆ, ಸಾಂಸತಿಕ ಸ್ಪರ್ಧೆ

Published on

ಕೊಪ್ಪಳ: ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಪ್ರಸಕ್ತ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಸೆ.9ರಂದು ನಗರದ ಪೊಲೀಸ್​ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ನಡಿಗೆ, ಬಕೆಟ್​ಗೆ ಬಾಲ್​ ಹಾಕುವಿಕೆ, ಮ್ಯೂಸಿಕಲ್​ ಚೇರ್​, ಸಾಂಸತಿಕ ಸ್ಪರ್ಧೆ, ಏಕ ಪಾತ್ರಾಭಿನಯ, ಗಾಯನ ಸ್ಪರ್ಧೆಗಳನ್ನು 60&70 ವರ್ಷದವರಿಗೆ ಆಡಿಸಲಾಗುವುದು. ವಯಸ್ಸಿನ ದಾಖಲೆ ತರಬೇಕು. ವಿಜೇತರಿಗೆ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕ್ರೀಡೆಯಲ್ಲಿ ಭಾಗಿಯಾದವರು ಸಾಂಸತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಿಲ್ಲ. ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ದೂ.ಸಂ: 08539-295496 ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net