ನಾಟಕ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

koppal science dram munirabad kukanoor mangaluru govt high school students
Published on

ಕೊಪ್ಪಳ: ತಾಲೂಕಿನ ಮುನಿರಾಬಾದ್​ನಲ್ಲಿ ಶನಿವಾರ ನಡೆದ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಕುಕನೂರು ತಾಲೂಕಿನ ಮಂಗಳೂರಿನ ಕರ್ನಾಟಕ ಪಬ್ಲಿಕ್​ ಶಾಲೆ, ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು.

ಮುನಿರಾಬಾದ್​ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಮಧುಗಿರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿರು. ಮಂಗಳೂರು ಶಾಲೆ ಮಕ್ಕಳು ಶಾಂತಮಣಿ ಎಚ್​. ಬಿ. ಅವರ ರಚನೆ ಹಾಗೂ ನಿರ್ದೇಶನದ "ಇಂಜಕ್ಷನ್​' ನಾಟಕ ತೃತೀಯ ಸ್ಥಾನಕ್ಕೆ ಭಾಜನವಾಯಿತು.

ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಸಲುವಾಗಿ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಿಂದ ವಿಜ್ಞಾನ ನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ವೈಜ್ಞಾನಿಕ ಅನ್ವೇಷಣೆ, ವಿಶ್ಲೇಷಣಾತ್ಮಕ ಪ್ರವೃತ್ತ ಜಾಗೃತಗೊಳಿಸುವುದು, ಅರಳುತ್ತಿರುವ ವಿಜ್ಞಾನಿಗಳಿಗೆ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶ. ಮೂಢನಂಬಿಕೆ, ಕಂದಾಚಾರ ಹೋಗಲಾಡಿಸುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿದೆ. ಜಿಲ್ಲೆ ಪ್ರತಿನಿಧಿಸಿದ ಮಕ್ಕಳು ಮೂರನೇ ಸ್ಥಾನ ಪಡೆದರೆ, ವಿದ್ಯಾರ್ಥಿ ವಿಜಯ ನಿಂಗಪೂರ ಉತ್ತಮ ನಟ ಪ್ರಶಸ್ತಿ ಪಡೆದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net