

ಕೊಪ್ಪಳ: ಪರಿಶಿಷ್ಟ ಜಾತಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಸೂರ್ಯವಂಶ ಕ್ಷತ್ರಿಯ ಕಾಟಿಕ್ ಕಲಾಲ್ ಸಮುದಾಯದಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಖಾಟಿಕ್, ಕಾಟಿಕ್, ಕಟುಗ, ಕಲಾಲ್, ಸೂರ್ಯವಂಶ ಕ್ಷತ್ರಿಯ, ಹಿಂದು ಕಲಾಲ್, ಹಿಂದು ಕಾಟಿಕ್ ಸೇರಿ ಹಲವಾರು ಹೆಸರುಗಳಿಂದ ಕರೆಯುವ ಸಮುದಾಯದ ಬಗ್ಗೆ ಪ್ರೊ.ಎಂ.ಗುರುಲಿಂಗಯ್ಯ ಕುಲ ಶಾಸ್ತ್ರೀಯ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ವರದಿ ಸಲ್ಲಿಸಿದ್ದಾರೆ. ಕುರಿ, ಮೇಕೆ ಮಾಂಸ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿಕೊಂಡಿರುವ ನಮ್ಮ ಸಮುದಾಯದವರು ಅಸ್ಪಶ್ಯರಂತೆ ಬದುಕುತ್ತಿದ್ದಾರೆ. ಸಮುದಾಯದ ಜನಸಂಖ್ಯೆ ಕಡಿಮೆ ಇದ್ದು, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ ಎಂದು ಹೇಳಿದರು.
ಸಮುದಾಯದ ಜಿಲ್ಲಾ ಗೌರವ ಅಧ್ಯಕ್ಷ ದೇವರಾಜ ಕಲಾಲ್, ಕಾರ್ಯಾಧ್ಯಕ್ಷ ಅಶೋಕ ಕಲಾಲ್, ಅಧ್ಯಕ್ಷ ರಮೇಶ ಕಾಟಿಕ್, ಕಾರ್ಯದರ್ಶಿ ಭರತ್ ಕಾಂಬ್ಳೇಕರ್ ಮತ್ತು ಇತರರಿದ್ದರು.