ಒಳ‌ ಮೀಸಲಾತಿ ಜಾರಿಗೊಳಿಸಲು ಕೊಪ್ಪಳ ವಕೀಲರ ಆಗ್ರಹ

IMG_20241021_111033
Published on

ಕೊಪ್ಪಳ: ಸುಪ್ರೀಂ‌ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಬರುವ ಸಚಿವ ಸಂಪುಟದಲ್ಲಿ ಸರ್ಕಾರ ಜಾರಿಗೆ ತರುವಂತೆ ಕೊಪ್ಪಳ‌ ಜಿಲ್ಲಾ ಪರಿಶಿಷ್ಟ ಜಾತಿ ವಕೀಲರ ಒಳ ಮೀಸಲಾತಿ ಹೋರಾಟ ಸಮಿತಿ ಸಂಚಾಲಕರು ಒತ್ತಾಯಿಸಿದರು.

ಕಳೆದ ಆಗಸ್ಟ್ ನಲ್ಲೇ ಒಳ‌ ಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ್ರೀಂಕೋರ್ಟ್ ತಿರ್ಪು ನೀಡಿದೆ. ರಾಜ್ಯ ಸರ್ಕಾರ ತಕ್ಷಣ ಮೀಸಲು ಕಲ್ಪಿಸಬೇಕು. ಎಲ್ಲ ಪಕ್ಷಗಳು ಇದಕ್ಕೆ ಸಹಕರಿಸಬೇಕು. ಯಾವುದೇ ರಾಜಕಾರಣ ಮಾಡಬಾರದು. ಒಳ ಮೀಸಲು ಹಂಚಿಕೆ ನ್ಯಾಯಬದ್ಧವಾಗಿದೆ. ಸಂವಿಧಾನಬದ್ಧವಾಗಿದ್ದು, ಜನ ಸಂಖ್ಯೆಗೆ ತಕ್ಕಂತೆ ಮೀಸಲು ವಿಭಾಗಿಸಲಾಗಿದೆ. ಈಗಾಗಲೇ ಹರಿಯಾಣ ಸರ್ಕಾರ ಜಾರಿ ಮಾಡಿದೆ. ತೆಲಂಗಾಣ ಸರ್ಕಾರ 60ದಿನದಲ್ಲಿ ಜಾರಿ ಮಾಡುವ ಭರವಸೆ ನೀಡಿದೆ. ರಾಜ್ಯದಲ್ಲೂ ಸಿಎಂ ಸಿದ್ದರಾಮಯ್ಯ ಮಾಡುವುದಾಗಿ ಹೇಳುತ್ತಿದ್ದಾರೆ. ಸುಪ್ರೀಂ ತೀರ್ಪು ಬಂದು ಎರಡು ತಿಂಗಳಾಗಿದೆ. ಆದರೂ ಜಾರಿ ಲಕ್ಷಣ ಕಾಣುತ್ತಿಲ್ಲವೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಬುಧವಾರ (ಅ.23) ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ತಕ್ಷಣ ಸರ್ಕಾರ ಸಂಪುಟದಲ್ಲಿ ಅನುಮೋದನೆ ನೀಡಿ ಒಳ‌ ಮೀಸಲು ಜಾರಿ ಮಾಡಬೇಕು. ಮೀಸಲು ಜಾರಿ ಮಾಡುವವರೆಗೆ ಸರ್ಕಾರಿ ನೇಮಕಾತಿ ನಿಲ್ಲಿಸಬೇಕು. ಒಳ ಮೀಸಲು ಜಾರಿ ವಿರೋಧಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಮುಂದುವರೆಯಲಿದೆ. ಒಳ ಮೀಸಲು ಜಾರಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಜನಸಂಖ್ಯೆಗೆ ತಕ್ಕಂತೆ ಹಂಚಿಕೆ‌ ಮಾಡಬೇಕಿದೆ ಎಂದರು.

ಸಮಿತಿ ಪದಾಧಿಕಾರಿಗಳಾದ ಡಿ.ಎಂ.ಪೂಜಾರ, ವಿರುಪಾಕ್ಷಪ್ಪ ಕಟ್ಟಿಮನಿ, ಪ್ರಕಾಶ ಎಲ್.ಹಾದಿಮನಿ, ಶಿವಾನಂದ ಎಸ್.ಹೊಸಮನಿ, ವೈ.ಜಯರಾಜ ವಕೀಲರು, ಸಂತೋಷ ಸಿ.ಕವಲೂರು, ಮಾರುತಿ ಚಾಮಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net