ವೃದ್ಧೆಯನ್ನು ಕುಟುಂಬದೊಂದಿಗೆ ಸೇರಿಸಿದ ಸಖಿ ತಂಡ

koppal sakhi one stop center old women rescue
Published on

ಕೊಪ್ಪಳ: ವಾರಸುದಾರರಿಲ್ಲದೆ ಬೀದಿಯಲ್ಲಿ ಅಸ್ವಸ್ಥಳಾಗಿದ್ದ ವೃದ್ಧೆಯೊಬ್ಬಳನ್ನು ರಸಿದ ಸಖಿ ತಂಡ ಚಿಕಿತ್ಸೆ ಕೊಡಿಸಿ, ಕುಟುಂಬದವರ ಪತ್ತೆ ಮಾಡಿ ಪುನರ್​ ಮಿಲನ ಮಾಡಿಸಿದೆ.

ಕಳೆದ ಆಗಸ್ಟ್​ನಲ್ಲಿ ದೈಹಿಕವಾಗಿ ಅಸ್ವಸ್ಥಳಾಗಿದ್ದ ವೃದ್ಧೆಯನ್ನು 108 ಆ್ಯಂಬುಲೆನ್ಸ್​ ಮೂಲಕ ರಸಿದ ತಂಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಆಪ್ತ ಸಮಾಲೋಚನೆ ಬಳಿಕ ವಿವರ ಪಡೆದಿದೆ. ಬಾಗಲಕೋಟೆ ಜಿಲ್ಲೆಯವಳಾಗಿದ್ದು, ಹೆಸರು ನೂರಜಾನ್​, ಮಗ ಬಾಬಾ ರಾಜ್​ ಎಂದು ತಿಳಿಸಿದ್ದಾಳೆ. ಚಿಕಿತ್ಸೆ ಬಳಿಕ ಹುಬ್ಬಳ್ಳಿ ಮದರ್​ ತೆರೇಸಾ ಮಿಷಿನರಿ ಆ್​ ಚಾರಿಟಿ ಟ್ರಸ್ಟ್​ನಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಕುಟುಂಬದವರು ಮಹಿಳೆ ವಿವರ ಪಡೆದು ಕೇಂದ್ರಕ್ಕೆ ಬಂದು ವಾಪಸ್​ ಕರೆದುಕೊಂಡು ಹೋಗಿದ್ದಾರೆಂದು ಸಖಿ ಕೇಂದ್ರದ ಆಡಳಿತಾಧಿಕಾರಿ ಯಮುನಾ ಬೆಸ್ತರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net