ಬೆಳೆ ಉಳಿಸಿಕೊಳ್ಳಲು ಹರಸಾಹ, ಮುಂದುವರಿದ ವರುಣನ ಅಬ್ಬರ

koppal rain farmer crop loss affect
Published on

ಕೊಪ್ಪಳ: ಜಿಲ್ಲೆಯಲ್ಲಿ ವರುಣನ ಅಬ್ಬರ ಬುಧವಾರವೂ ಮುಂದುವರೆದಿದೆ. ರೈತರು ಒಂದೆಡೆ ಬೆಳೆ ಕಳೆದುಕೊಂಡಿದ್ದರೆ, ಮತ್ತೊಂದೆಡೆ ರಾಶಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸತತ ಮಳೆಯಿಂದ ಕೈಗೆ ಬಂದ ಬೆಳೆ ನೆಲಸಮವಾಗಿದೆ. ಕೊಪ್ಪಳ, ಕುಕನೂರು, ಗಂಗಾವತಿ ಕಾರಟಗಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಮುಖ್ಯವಾಗಿ ಮೆಕ್ಕೆಜೋಳ, ತೊಗರಿ, ಭತ್ತ, ಅಲಸಂದಿ, ಹತ್ತಿ, ಈರುಳ್ಳಿ ಬೆಳೆಗಳಿಗೆ ಹಾನಿಯಾಗಿದೆ. ಕಟಾವಿಗೆ ಬಂದ ಬೆಳೆ ಕಳೆದುಕೊಂಡು ರೈತರು ಕಣ್ಣೀರಿಡುತ್ತಿದ್ದಾರೆ. ಈರುಳ್ಳಿ ನೀರಲ್ಲಿ ಕೊಚ್ಚಿ ಹೋಗಿದೆ. ಅ.1ರಿಂದ 15ವರೆಗೆ ಒಟ್ಟು 250 ಹೆಕ್ಟೇರ್​ ಪ್ರದೇಶದಲ್ಲಿ ಕೃಷಿ ಬೆಳೆ, 50 ಹೆಕ್ಟೇರ್​ನಲ್ಲಿ ತರಕಾರಿ ಬೆಳೆಗಳು ನಷ್ಟವಾಗಿವೆ. ಇನ್ನು ಒಂದೆರೆಡೆ ದಿನ ಮಳೆ ಮುಂದುವರೆದಿದ್ದು, ಇನ್ನಷ್ಟು ನಷ್ಟ ಸಂಭವಿಸುವ ಅಂದಾಜಿದೆ. ಮೆಕ್ಕೆಜೋಳ ತೆನೆ ಮುರಿಯುವ ಹಂತದಲ್ಲಿದ್ದೆರೆ, ಈರುಳ್ಳಿ ಕಿತ್ತಿ ಒಣ ಹಾಕಲಾಗಿದೆ. ಭತ್ತ ಗಾಳಿ ಮಳೆಗೆ ನೆಲಕ್ಕುರುಳಿದೆ. ಕಂದು ಜಿಗಿ ಹುಳು ಭಾದೆ ಹೆಚ್ಚುವ ಭೀತಿ ಶುರುವಾಗಿದೆ. ಕೃಷಿ, ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ವರದಿ ಸಲ್ಲಿಸುತ್ತಿದ್ದಾರೆ.

ಮತ್ತೊಂದೆಡೆ ಮೆಕ್ಕೆಜೋಳ ರಾಶಿ ಮಾಡಿದ್ದು, ಮಳೆ ಕಾರಣ ಒಣಗಿಸುವುದು ಸಮಸ್ಯೆಯಾಗಿದೆ. ನಾಲ್ಕೆ$ದು ದಿನಗಳಿಂದ ಮಳೆರಾಯ ಆಗಾಗ ಸುರಿಯುತ್ತಿದ್ದಾನೆ. ರಸ್ತೆ, ಹೊಲ ಸೇರಿ ಬಯಲು ಪ್ರದೇಶದಲ್ಲಿ ಹಾಕಿದ ರಾಶಿಗಳ ಬಳಿ ರೈತರು ಹಗಲುರಾತ್ರಿ ಕಾವಲು ಕಾಯುತ್ತಿದ್ದಾರೆ. ಅರೆ ಳಿಗೆ ಬಿಸಿಲು ಬಿದ್ದರೆ, ಕೆಲ ಕ್ಷಣಗಳಲ್ಲೇ ಮೋಡ ಕವಿದು ಮಳೆಯಾಗುತ್ತಿದೆ. ವಾತಾವರಣ ಏರುಪೇರಿನಿಂದ ಬೆಳೆ ಒಣಗಿಸುವುದು ಕಷ್ಟವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net