

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ ಶುಕ್ರವಾರ ಮುಕ್ತಾಯವಾದವು.
ಮೊದಲ ದಿನ ಮಹಿಳಾ ಪಂದ್ಯಾವಳಿ ಜರುಗಿದರೆ, ಎರಡನೇ ದಿನ ಪುರುಷ ವಿಭಾಗದ ಕ್ರೀಡಾಕೂಟ ಜರುಗಿದವು. ಅಥ್ಲೆಟಿಕ್ ವಿಭಾಗ, ಖೋಖೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ನಡೆದವು. ಕಬಡ್ಡಿಯಲ್ಲಿ ವೈಟಿಆರ್ ಪಿಯು ಕಾಲೇಜು ಗಂಗಾವತಿ (ಪ್ರಥಮ), ಕೆಪಿಎಸ್ ಪಿಯು ಕಾಲೇಜು ಕಾರಟಗಿ (ದ್ವೀತಿಯ) ಸ್ಥಾನ ಪಡೆದವು. ಖೋಖೋದಲ್ಲಿ ಎಸ್ಜಿ ಪಿಯು ಕಾಲೇಜು (ಪ್ರಥಮ), ಸ.ಪ.ಪಿಯು ಕಾಲೇಜು ಹನುಮಸಾಗರ(ದ್ವೀತಿಯ), ವಾಲಿಬಾಲ್ನಲ್ಲಿ ವಿಎನ್ಸಿ ಪಿಯು ಕಾಲೇಜು ಮುನಿರಾಬಾದ್ (ಪ್ರಥಮ), ವಿದ್ಯಾನಂದ ಗುರುಕುಲ ಪಿಯು ಕಾಲೇಜು ಕುಕನೂರು (ದ್ವೀತಿಯ), ಥ್ರೋ ಬಾಲ್ನಲ್ಲಿ ವಿದ್ಯಾನಿಕೇತನ ಪಿಯು ಕಾಲೇಜು ಶ್ರೀರಾಮ ನಗರ (ಪ್ರಥಮ), ಎಸ್ಎಸ್ವಿ ಪಿಯು ಕಾಲೇಜು ತಾವರಗೇರಾ (ದ್ವೀತಿಯ) ಸ್ಥಾನ ಪಡೆದವು.
ಖೋಖೋ ಅಂತಿಮ ಪಂದ್ಯ ವೇಳೆ ಹೊರಗಿನ ವ್ಯಕ್ತಿನ್ನು ಆಟವಾಡಿಸಿದ್ದಾರೆಂಬ ವಿಷಯಕ್ಕೆ ಗೊಂದಲ ಉಂಟಾಯಿತು. ಎಸ್ಜಿ ಕಾಲೇಜು ಹಾಗೂ ಹನುಸಾಗರ ಕಾಲೇಜು ಪಂದ್ಯ ವೇಳೆ ಕೆಲ ಕಾಲ ಆಟ ಸ್ಥಗಿತವಾಗಿಯಿತು. ಹೊಸದಾಗಿ ಪಂದ್ಯ ಆಡಿಸುವಂತೆ ಬೇಡಿಕೆ ಇಟ್ಟರು. ಬಳಿಕ ನಿರ್ಣಾಯಕರು ಗೊಂದಲ ತಿಳಿಮಾಡಿದರು.