ರೈತರಿಗೆ ಸೂಕ್ತ ಪರಿಹಾರ ಒದಗಿಸಿ; ಶಾಸಕ ರಾಘವೇಂದ್ರ ಹಿಟ್ನಳ್ ಒತ್ತಾಯ

Raghavendra Hitnal MLA
Published on

ಕೊಪ್ಪಳ: ಅಕಾಲಿಕ ಮಳೆಯಿಂದ ರೈತರಿಗೆ ಸಾಕಷ್ಟು ನಷ್ಟವಾಗಿದ್ದು, ಸರ್ಕಾರ ಕೂಡಲೇ ಸೂಕ್ತ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ರಾಘವೇಂದ್ರ ಹಿಟ್ನಳ್ ಒತ್ತಾಯಿಸಿದರು.

ತಾಲೂಕಿನ ಹಿಟ್ನಾಳ್ ಹೋಬಳಿಯ ಹೊಲಗಳಿಗೆ ಬುಧವಾರ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ ಮಾತನಾಡಿದರು. ಅಪಾರ ಮಳೆಯಿಂದ ಕಟಾವಿಗೆ ಬಂದ ಭತ್ತ, ಈರುಳ್ಳಿ ಸೇರಿದಂತೆ ಇತರ ಬೆಳೆ ಹಾನಿಯಾಗಿವೆ. ಅಧಿಕಾರಿಗಳು ಸಮರ್ಪಕ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಬೇಕು. ರೈತರಿಂದ ವಾಸ್ತವ ಮಾಹಿತಿ ಪಡೆಯಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ವರದಿ ಪರಿಶೀಲಿಸಬೇಕು. ಸರ್ಕಾರ ಹೆಕ್ಟೇರ್ ಭತ್ತಕ್ಕೆ 25 ಸಾವಿರ ರೂ. ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು. ಶಿವಪುರ, ಅಗಳಕೇರಾ, ಹಿಟ್ನಾಳ್, ಬಂಡಿಹರ್ಲಾಪುರ ಸೇರಿದಂತೆ ಇತರ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ತಹಸೀಲ್ದಾರ್ ಅಮರೇಶ ಬಿರಾದಾರ್, ತಾಪಂ ಇಒ ಕೆ.ಎಂ.ಮಲ್ಲಿಕಾರ್ಜುನ ಇತರ ಅಧಿಕಾರಿಗಳು, ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net